ಮಕ್ಕಳು ಮನೆಯಲ್ಲಿ ಅರಳುವ ಹೂವುಗಳು ಆಚಾರ ವಿಚಾರ ಸಂಸ್ಕೃತಿಗಳನ್ನು ಕಲಿಸಬೇಕು – ಅನುರಾಧ ಕುರುಂಜಿ.
ಸುಳ್ಯ: ವಿಶ್ವ ಹಿಂದು ಪರಿಷದ್ ಬಜರಂಗದಳ ಸುಳ್ಯ ನಗರ ಇದರ ಆಶ್ರಯದಲ್ಲಿ ಎಪ್ರಿಲ್ ೨೦ ರಿಂದ ಮೇ ೨ ರ ವರೆಗೆ ನಡೆದ ಮಕ್ಕಳ ಬೇಸಿಗೆ ಶಿಬಿರವು ಸಂಪನ್ನವಾಯಿತು .
ಶಿಬಿರದ ಸಮಾರೋಪ ಸಮಾರಂಭವು ಸುಳ್ಯ ಶ್ರೀ ಚೆನ್ನಕೇಶವ ದೇವಾಲಯದ ಸಭಾ ಭವನದಲ್ಲಿ ನಡೆಯಿತು ಸಮಾರಂಭದ ಅಧ್ಯಕ್ಷತೆಯನ್ನು ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ವಹಿಸಿದ್ದರು . ಸಂಪನ್ಮೂಲ ವ್ಯಕ್ತಿ ಅನುರಾಧ ಕುರುಂಜಿ ಮತನಾಡುತ್ತಾ ಮಕ್ಕಳು ನಮ್ಮ ಮನೆಯಲ್ಲಿ ಅರಳುವ ಹೂವುಗಳು ಇವುಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುವುದನ್ನು ಪೋಷಕರು ಯೋಚಿಸಬೇಕಾಗಿದೆ ಎಂದು ಹೇಳಿದರು . ವಿದ್ಯಾವಂತರಿಂದ ಇಂದು ಕೆಟ್ಟದ್ದು ಅನ್ನುವ ಕಾಲಘಟ್ಟಕ್ಕೆ ತಲುಪಿದ್ದೆವೆ ಆದರೆ ಹಿಂದಿನ ಕಾಲದಲ್ಲಿ ಪೋಲಿಸ್ ಠಾಣೆ ಮತ್ತು ಕೋರ್ಟ್ ಕಛೇರಿಗಳ ಸಂಖ್ಯೆ ಕಡಿಮೆ ಇದ್ದವು ಆದರೆ ಇಂದು ಎಲ್ಲವು ಹೆಚ್ಚಾಗಿದೆ ಅದೇ ಮಾದರಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದೆ ಇದನ್ನು ತಡೆಯಲು ಸಂಸ್ಕೃತಿಯ ಮೂಲಕ ಸಾಧ್ವವೆಂದು ಹೇಳಿದರು . ಭಜನೆಯಿಂದ ಒಂದು ಗೂಡಿಸುವ ಕೆಲಸವಾಗುತ್ತಿದೆ ಭಜನೆ ಮಾಡದೇ ಇರುವ ಮನೆಗಳಲ್ಲಿ ವಿಭಜನೆ ಪ್ರಾರಂಭವಾಗುತ್ತದೆ ಎಂದು ಹೇಳಿದರು . ಸಭಾ ವೇದಿಕೆಯಲ್ಲಿ ವಿಶ್ವಹಿಂದು ಪರಿಷದ್ ಅಧ್ಯಕ್ಷರಾದ ಸೋಮಶೇಖರ್ ಪೈಕಾ , ಉಮೇಶ್ ಸಾಯಿರಾಂ , ಕಿರಣ್ ಕುಮಾರ್ ಬೆಟ್ಟಂಪ್ಪಾಡಿ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಸುಮಾರು ೨೦೪ ಮಕ್ಕಳು ಮತ್ತು ಪೋಷಕರು, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ , ನವೀನ್ ಎಲಿಮಲೆ , ದೇವಿಪ್ರಸಾದ್ ಅತ್ಯಾಡಿ ಸೇರಿದಂತೆ ಇತರರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು ಅಭಿಜ್ಛಾ ಭಟ್ ಸ್ವಾಗತಿಸಿ ವರ್ಷಿತ್ ಚೊಕ್ಕಾಡಿ ವಂದಿಸಿದರು ವಿಧ್ಯಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು .