ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ತಾಲೂಕು ಮತ್ತು ಯವಜನ ಸೇವಾ ಸಂಸ್ಥೆ(ರಿ.) ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ 2023 ರ ಗಾಂಧಿಜಯಂತಿ ಆಚರಣೆ ಮತ್ತು ಗಾಂಧಿಸ್ಕೃತಿ ಪ್ರಶಸ್ತಿ ಪ್ರಧಾನ’ ಕಾರಕ್ರಮವನ್ನು ಸಂಘಟಿಸಿದ್ದು, ನವಂಬರ್ 7 ಶನಿವಾರದಂದು ಹರಿಹರ ಪಲ್ಲತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನ ಕಲಾಮಂದಿರದಲ್ಲಿ ನಡೆಯಲಿದೆ ಎಂದು ದೀಪಕ್ ಕುತ್ತಮೊಟ್ಟೆ ತಿಳಿಸಿದರು. ಅವರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಾ ಸುಳ್ಯದ ಶಾಸಕಿ ಹಾಗೂ ಮಂಡಳಿಯ ಪೂರ್ವಾಧ್ಯಕ್ಷರಾದ ಕು| ಭಾಗೀರಥಿ ಮುರುಳ್ಯರವರು ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಸಭಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ಸಂಸ್ಥೆಗಳ ವತಿಯಿಂದ 2023ರ ‘ಗಾಂಧಿಸ್ಕೃತಿ ಪ್ರಶಸ್ತಿ’ ಯನ್ನು ಆ ಭಾಗದ ಹಿರಿಯ ವೈದ್ಯರು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ 82 ವರ್ಷ ಪ್ರಾಯದ ಡಾ|| ಚಂದ್ರಶೇಖರು ಕಿರಿಭಾಗರವರಿಗೆ ಪ್ರಧಾನ ಮಾಡಿ ಸನ್ಮಾನಿಸಲಿದ್ದೇವೆ. ವಿಧಾನಪರಿಷತ್ ಸದಸ್ಯರಾದ ಎಚ್.ಎಲ್ ಭೋಜೇಗೌಡ ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಗಾಂಧಿ ಪ್ರತಿಪಾದನೆಯ ಮೌಲ್ಯಗಳ ಕುರಿತು ವಿಶ್ರಾಂತ ಪ್ರಾಂಶುಪಾಲ, ಪ್ರಭಾಕರ ಕಿರಿಭಾಗರವರು ಮುಖ್ಯ ಮಾತನಾಡಲಿದ್ದಾರೆ. ಹರಿಹರೇಶ್ವರ ಭಜನ ಮಂಡಳಿಯ ತಂಡದವರು ಗಾಂಧಿ ಜಯಂತಿ ಪ್ರಯುಕ್ತ ‘ಮೀರಾ ಭಜನೆ’ಯನ್ನು ನಡೆಸಿಕೊಡಲಿದ್ದಾರೆ ಅಲ್ಲದೇ ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ರವರು ಗೌರವ ಉಪಸ್ಥಿತರಿರುತ್ತಾರೆ. ಕಾಠ್ಯಕ್ರಮದಲ್ಲಿ ಕೊಲ್ಲಮೊಗ್ರ, ಬಾಳುಗೋಡು ಐನೆಕಿದು ಹರಿಹರಪಲ್ಲತ್ತಡ್ಕ, ಮತ್ತು ಕಲ್ಕಾರು ಗ್ರಾಮ ವ್ಯಾಪ್ತಿಗೆ ಪಟ್ಟ ಯುವಕ-ಯುವತಿ ಹಾಗೂ ಹವ್ಯಾಸಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಈ ಕಾಠ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದೂ ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕೊತ್ತಮೊಟ್ಟೆ ಮತ್ತು ಯುವಜನ ಸಂಯಕ್ತ ಮಂಡಳಿಯ ಅಧ್ಯಕ್ಷರಾದ ಪ್ರವೀಣ ಕುಮಾರ್ ಎಮ್ ರವರು ತಿಳಿಸಿದರು. ಶೈಲೇಶ್ ಅಂಬೆಕಲ್ಲು ಮಾತನಾಡಿ ನಮ್ಮ ಶಿಕ್ಷಣ ಕ್ಷೇತ್ರದಿಂದ ಚುನಾಯಿತರಾಗಿ ಆಯ್ಕೆಯಾದ ಎಚ್ ಎಲ್ ಭೋಜೆಗೌಡರ ಜೊತೆಗೆ ಶಿಕ್ಷರ ಸಮಸ್ಯೆಗಳ ಬಗ್ಗೆ ಸಂವಹನ ಕಾರ್ಯಕ್ರಮವನ್ನು ಏರ್ಪಡಿಸಿದ್ದೆವೆ ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಶಂಕರ್ ಪೆರಾಜೆ, ದಿನೇಶ್ ಮಡಪ್ಪಾಡಿ ,ದಯಾನಂದ ಕೇರ್ಪಳ , ವಿನುತ ಪಾತಿಕಲ್ಲು, ವಿಜಯ್ ಉಬರಡ್ಕ, ಪ್ರಸಾದ್ ಕಾಟೂರು, ದಿನೇಶ್ ಹಾಲೆಮಜಲು ಮತ್ತಿತರರು ಉಪಸ್ಥಿತರಿದ್ದರು.
- Thursday
- November 21st, 2024