ನೆಹರೂ ಯುವ ಕೇಂದ್ರ ಮಂಗಳೂರು, ಮಾನಸ ಮಹಿಳಾ ಮಂಡಲ (ರಿ) ಜಟ್ಟಿಪಳ್ಳ, ಮತ್ತು ಕಪಿಲ ಯುವಕ ಮಂಡಲ (ರಿ) ಜಟ್ಟಿಪಳ್ಳ ಇವುಗಳ ಸಂಯುಕ್ತ ಆಶ್ರಯದಲ್ಲಿ ನಮ್ಮ ದೇಶ ನಮ್ಮ ಮಣ್ಣು ದ್ಯೇಯ ವಾಕ್ಯ ದೊಂದಿಗೆ ದೆಹಲಿಯಲ್ಲಿ ಸ್ವಾತಂತ್ರ್ಯ ಹೋರಾಟದ ವೀರ ಯೋಧರ ಸ್ಮರಣಾರ್ಥ ನಿರ್ಮಾಣಗೊಳ್ಳಲಿರುವ ಪಾರ್ಕ್ ಮನೆ ಮನೆ ಗಳಿಂದ ಮಣ್ಣು ಸಂಗ್ರಹದ *ಅಮ್ರತ ಕಳಸ ಕಾರ್ಯಕ್ರಮವು ಜಟ್ಟಿಪಳ್ಳದ ಯುವ ಸದನ ಮತ್ತು ಮಹಿಳಾ ಮಂಡಳದ ವಠಾರ ಮತ್ತು ಜಟ್ಟಿಪಳ್ಳದ ವಿವಿಧ ಮನೆಗಳ ವಠಾರಗಳಲ್ಲಿ ವಿಶಿಷ್ಟ ರೀತಿಯಲ್ಲಿ ಜರುಗಿತು. ಮಹಿಳಾ ಮಂಡಲದ ಗೌರವಾಧ್ಯಕ್ಷೆ ಚಂದ್ರಾಕ್ಷಿ ಜೆ ರೈ ಪ್ರತಿಜ್ಞೆ ಭೋಧಿಸಿದರು.
ಯುವಕ ಮಂಢಲದ ಆಧ್ಯಕ್ಷ ಹರೀಶ್ ಜಿ ಜೆ ಎಲ್ಲರನ್ನೂ ಸ್ವಾಗತಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ವಂದನಾರ್ಪಣೆ ಗೈದರು. ಯುವಕ ಮಂಡಲದ ಖಜಾಂಜಿ ನಿತೀಶ್, ಮಹಿಳಾ ಮಂಡಲದ ಕಾರ್ಯದರ್ಶಿ ಅನನ್ಯ ಅನಿಲ್, ಖಜಾಂಜಿ ಸವಿತಾ ಲಕ್ಷ್ಮಣ, ಯುವಕ ಮಂಡಲದ ಮತ್ತು ಮಹಿಳಾ ಮಂಡಳದ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಮನೆಗಳಿಗೆ ತೆರಳಿ ಆಮ್ರತ ಕಳಸಕ್ಕಾಗಿ ಮಣ್ಣು ಸಂಗ್ರಹಿಸಲಾಯಿತು.