ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ತಾಲೂಕು ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ವತಿಯಿಂದ 03.11.23 ರಿಂದ 10.11.23 ವರೆಗೆ ಅಜ್ಜಾವರದ ಮಹಿಷ ಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಜರುಗುವ ಮಧ್ಯವರ್ಜನ ಶಿಬಿರ ಪೂರ್ವ ತಯಾರಿ ಸಭೆ ಮತ್ತು ಸಮಿತಿ ರಚನೆಯ ಸಭೆಯನ್ನು ಅಜ್ಜಾವರ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ಸಭಾ ಭವನದಲ್ಲಿ ನಡೆಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಶಿವಪ್ರಕಾಶ್ ಅಡ್ಪಂಗಾಯ ಗುರುಸ್ವಾಮಿಗಳು ಇವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಸಂದರ್ಭ ಲೋಕನಾಥ ಅಮಚೂರ್ ತಾಲೂಕು ಅಧ್ಯಕ್ಷರು ಜನಜಾಗೃತಿ ವೇದಿಕೆ ಸುಳ್ಯ ಎನ್ಎ ರಾಮಚಂದ್ರ ಪೂರ್ವ ಜಿಲ್ಲಾಧ್ಯಕ್ಷರು ಜನ ಜಾಗೃತಿ ವೇದಿಕೆ ಸುರೇಶ್ ಕಣೆಮರಡ್ಕ ಅಧ್ಯಕ್ಷರು ಕೇಂದ್ರ ಒಕ್ಕೂಟ ಎ ಭಾಸ್ಕರ್ ಭಯಂಬು ಪ್ರವೀಣ್ ಕುಮಾರ್ ಜಿಲ್ಲಾ ನಿರ್ದೇಶಕರು ಗಣೇಶ ಆಚಾರ್ಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಯವರು ನಾಗೇಶ್ ಪಿ ಯೋಜನಾಧಿಕಾರಿಗಳು ಮಹೇಶ್ ರೈ ಮೇನಾಲ, ರಾಜೇಶ್ ರೈ ಮೇನಾಲ, ಭಾಸ್ಕರ್ ನಿವೃತ್ತ ಎ ಎಸ್ ಐ , ವೆಂಕಪ್ಪ ಗೌ,ಡ ಬಾಲಕೃಷ್ಣ ಬಳ್ಳೂರು, ಸುಭೋದ ಶೆಟ್ಟಿ ಮೇನಾಲ, ಗುರುರಾಜ್ ಅಜ್ಜಾವರ, ವಿನುತ ಪಾತಿಕಲ್ಲು, ಸತ್ಯವತಿ ಬಸವನಪಾದೆ, ಪದ್ಮನಾಭ ಜೈನ್, ಉದಯ್ ಆಚಾರ್, ಸುರೇಶ್ ಕಣೆಮರಡ್ಕ,ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕಿನ ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷರುಗಳು ನಿಕಟಪೋರ್ವ ಅಧ್ಯಕ್ಷರುಗಳು ಅಜ್ಜಾವರ ವಲಯದ ಕಲ್ಲಡ್ಕ, ಮಂಡೆಕೋಲು, ಪೇರಾಲು, ಅಜ್ಜಾವರ, ಮೇನಾಲ, ಮುಳ್ಯ, ಕಾಂತಮಂಗಲ, ದೊಡ್ಡೇರಿ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನವ ಜೀವನ ಸಮಿತಿಯ ಅಧ್ಯಕ್ಷರು ಸದಸ್ಯರು ಅಜ್ಜಾವರ ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯರುಗಳು ಮಂಡೆಕೋಲು ಅಜ್ಜಾವರುಗಳು ಪ್ರಾಥಮಿಕ ಸಹಕಾರಿ ಸಂಘಗಳ ಅಧ್ಯಕ್ಷರುಗಳು ಧನಲಕ್ಷ್ಮಿ ಮಹಿಳಾ ಮಂಡಳ, ಚೈತ್ರ ಯುವತಿ ಮಂಡಳ, ಪ್ರತಾಪ ಯುವಕ ಮಂಡಲ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರು, ವನದುರ್ಗ ಭಜನಾ ಮಂಡಳಿ ಸಮಿತಿ ಸದಸ್ಯರು, ಶೌರ್ಯ ಘಟಕದ ಕ್ಯಾಪ್ಟನ್ ಮತ್ತು ಮಾಸ್ಟರ್ ಭಜಾನ ಪರಿಷತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಾಲೂಕಿನ ಎಲ್ಲಾ ಮೇಲ್ವಿಚಾರಕರು ಅಜ್ಜಾವರ ವಲಯದ ಎಲ್ಲಾ ಸೇವಾ ಪ್ರತಿನಿಧಿಯವರು ಅಜ್ಜಾವರ ಗ್ರಾಮದ ಇತರೆ ಸಂಘ ಸಂಸ್ಥೆಯ ಸದಸ್ಯರುಗಳು ಸಮಿತಿ ರಚನೆಗೆ ಮಧ್ಯವರ್ಜನ ಶಿಬಿರದ ಪೂರ್ವ ತಯಾರಿ ಸಭೆಯಲ್ಲಿ ಭಾಗವಹಿಸಿದ್ದರು. ವಲಯದ ಮೇಲ್ವಿಚಾರಕರಾದ ವಿಶಾಲ ಕೆ ನಿರೂಪಿಸಿ ಸುಳ್ಯ ವಲಯದ ಮೇಲ್ವಿಚಾರಕರ ಪ್ರಿಯ ಸ್ವಾಗತಿಸಿ ತಾಲೂಕಿನ ಕೃಷಿ ಅಧಿಕಾರಿ ರಮೇಶ್ ವಂದಿಸಿದರು.