
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರ ಸಭೆ ಆಲೆಟ್ಟಿ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಈ ಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗಿಯಾದರು. ಈ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಪಕ್ಷದ ಸಂಘಟನೆಯಲ್ಲಿ ಅನೇಕ ಕಾರ್ಯಕರ್ತರು ತಮ್ಮ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ಹಗಲಿರುಳು ಕೆಲಸ ಮಾಡಿದ ಪರಿಣಾಮ ಪಕ್ಷ ಇಂದು ಸದೃಢವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶ್ರಮಿಸಿದ ದೇವದುರ್ಲಬ ಕಾರ್ಯಕರ್ತರಿಗೆ ಕೃತಜ್ಞತೆ ಹಾಗೂ ಧನ್ಯವಾದ ಹೇಳಿದರು.ವೇದಿಕೆಯಲ್ಲಿ ಕರುಣಾಕರ ಆಸ್ಪರೆ, ವೀಣಾ ಕುಮಾರಿ, ಎನ್ ಎ ರಾಮಚಂದ್ರ, ಚನಿಯ ಕಲ್ತಡ್ಕ, ಜಯಪ್ರಕಾಶ್ ಕುಂಚಡ್ಕ, ಕೃಪಾಶಂಕರ್, ಶ್ರೀಪತಿ ಭಟ್, ಸುನೀಲ್ ಕೇರ್ಪಳ ಹಾಗೂ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.