Ad Widget

ದಿ.ತೇಜಾವತಿ ಕುಶಾಲಪ್ಪ ಪಟೇಲ್ ಕೇವಳ ಅವರಿಗೆ ನುಡಿ ನಮನ ಕಾರ್ಯಕ್ರಮ

ಮಡಪ್ಪಾಡಿ ಗ್ರಾಮದ ಕೇವಳ ಮನೆತನದ ದಿ.ಕುಶಾಲಪ್ಪ ಪಟೇಲ್ ಅವರ ಪತ್ನಿ ಶ್ರೀಮತಿ ತೇಜಾವತಿ ಕುಶಾಲಪ್ಪ ಪಟೇಲ್ ಅವರ ನುಡಿನಮನ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮ ಸ.17ರಂದು ಪಟೇಲ್ ಮನೆ ಕೇವಳದಲ್ಲಿ ನಡೆಯಿತು.ತೇಜಾವತಿಯವರ ಆದರ್ಶ ಬಾಳ್ವೆಯ ಕುರಿತು ಕುಟುಂಬದವರಾದ ಸೋಮಶೇಖರ ಕೇವಳ  ಹಾಗೂ ಮೃತರ ಪುತ್ರ ಸೈನಿಕ್ ಸ್ಕೂಲ್ ವಿಜಯಪುರದ ನಿವೃತ್ತ ಉಪನ್ಯಾಸಕ ದಾಮೋದರ ಕೇವಳ ತಮ್ಮ ಮಾತೃಶ್ರೀಯವರಿಗೆ ನುಡಿ ನಮನ ಸಲ್ಲಿಸಿದರು.  ಹಿರಿಯ ಪುತ್ರ ಜಯರಾಮ ಕೇವಳ ಭಾವಚಿತ್ರಕ್ಕೆ ದೀಪ ಬೆಳಗಿಸಿದರು. ಬಳಿಕ ಮೌನ ಪ್ರಾರ್ಥನೆ ಮತ್ತು ಪುಷ್ಪ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಕ್ಕಳಾದ ಪ್ರಗತಿಪರ ಕೃಷಿಕ ಜಯರಾಮ ಕೇವಳ, ನಿವೃತ್ತ ಡಿ ಎಫ್ ಓ ಪದ್ಮನಾಭ ಕೇವಳ, ಸೈನಿಕ್ ಸ್ಕೂಲ್ ವಿಜಯಪುರದ ನಿವೃತ್ತ ಉಪನ್ಯಾಸಕ ದಾಮೋದರ ಕೇವಳ, ನಿವೃತ್ತ ಇಂಜಿನಿಯರ್ ಕೃಷ್ಣ ಕುಮಾರ್ ಕೇವಳ , ಪ್ರಗತಿಪರ ಕೃಷಿಕ ನಿತ್ಯಾನಂದ ಕೇವಳ, ಕೆವಿಜಿ ಇಂಜಿನಿಯರಿಂಗ್ ಕಾಲೇಜು ಉದ್ಯೋಗಿ ಹರೀಶ್ ಕೇವಳ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಮೃತರ ಸಹೋದರರಾದ ಉದ್ಯಮಿ ಮುಕುಂದ ಗೌಡ ಕುದ್ಕುಳಿ, ನಿವೃತ್ತ ವಿಸ್ತರಣಾಧಿಕಾರಿ ಬಾಲಚಂದ್ರ ಕುದ್ಕುಳಿ, ಸಹೋದರಿಯರಾದ ಪದ್ಮಾವತಿ ಅಣ್ಣಪ್ಪ ಗೌಡ ಕೊಳಕ್ಕೆ, ಸಾವಿತ್ರಿ ಪೂವಪ್ಪ ಗೌಡ ಎರಬೈಲು, ನಿವೃತ್ತ ಅಧ್ಯಾಪಕಿ ಭಾಗೀರಥಿ ಬೆಳ್ಯಪ್ಪ ಗೌಡ ಪೂಜಾರಿಮನೆ,ಕೇವಳ ಕುಟುಂಬಸ್ಥರು,ಬಂಧು -ಮಿತ್ರರು,ಹಿತೈಷಿಗಳು ಉಪಸ್ಥಿತರಿದ್ದರು. ಮೃತರ ಬಂಧು ಉಪನ್ಯಾಸಕಿ ಕು. ಬೇಬಿ ವಿದ್ಯಾ ಪಿ ಬಿ ಕಾರ್ಯಕ್ರಮ ನಿರ್ವಹಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!