Ad Widget

ಸುಳ್ಯದ ಹಳೆಗೇಟಿನಲ್ಲಿ ರಿಕ್ಷಾ ಚಾಲಕ ಮತ್ತು ಈರ್ವರು ಪ್ರಯಾಣಿಕರಿಂದ ಹಲ್ಲೆ, ದರೋಡೆ – ಪ್ರಕರಣ ದಾಖಲು.

ಸುಳ್ಯ ಹಳೆಗೇಟು ಸಮೀಪ ಮಡೆಕೇರಿ ಮೂಲದ ಕಾರುಗುಂದ ಗ್ರಾಮ ನಿವಾಸಿ ದರ್ಶನ್‌ ‌ಎಂಬುವರ ಹಣ ಮತ್ತು ತಮ್ಮ ಅಗತ್ಯ ಧಾಖಲೆಗಳುಳ್ಳ ಬ್ಯಾಗನ್ನು ದರೋಡೆಗೈದ ಘಟನೆ ವರದಿಯಾಗಿದೆ. 18.09.2023ರಂದು ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದಿದ್ದ ದರ್ಶನ್ ರಾತ್ರಿ ಸುಮಾರು 11:15 ಗಂಟೆಗೆ ಊರಿಗೆ ಹಿಂತಿರುಗುವ ಸಲುವಾಗಿ, ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳಲು ಹಳೆಗೇಟಿನಲ್ಲಿ ಆಟೋರಿಕ್ಷಾ ವೊಂದನ್ನು ಹತ್ತಿರುತ್ತಾರೆ. ಈ ವೇಳೆ ಆಟೋದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರು ದರ್ಶನ್ ಆಟೋದಲ್ಲಿ ಕುಳಿತ ಕೂಡಲೇ ಚಾಲಕ ಹಾಗೂ ಪ್ರಯಾಣಿಕರಿಬ್ಬರು ಸೇರಿ ಬ್ಯಾಗ್‌‌ ನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಈತ ಪ್ರತಿರೋಧ ತೋರಿದಾಗ ಆತನ ಮೇಲೆ ಹಲ್ಲೆ ನಡೆಸಿ, ಬ್ಯಾಗನ್ನು ಕಿತ್ತುಕೊಂಡು ರಿಕ್ಷಾದಿಂದ ದೂಡಿ ಹಾಕಿ ಆಟೋದಲ್ಲಿ ಪರಾರಿಯಾಗಿರುತ್ತಾರೆ ಎಂದು ತಿಳಿದು ಬಂದಿದೆ.

. . . . . . .

ದರ್ಶನ್ ಅವರ ಬ್ಯಾಗಿನಲ್ಲಿ ತಮ್ಮ ವ್ಯವಹಾರದ ಹಣ ಒಟ್ಟು 3.5 ಲಕ್ಷ ರೂಪಾಯಿ, ಎರಡು ಮೊಬೈಲ್ ಗಳು,ಅಲ್ಲದೆ ಗುರುತಿನ ಚೀಟಿಗಳು ಹಾಗೂ ಮೂರು ಎಟಿಎಂ ಕಾರ್ಡ್ ಗಳಿದ್ದು, ಘಟನೆಯ ಸಮಯ ಅಟೋ ರಿಕ್ಷಾದ ನೋಂದಣಿ ಸಂಖ್ಯೆಯನ್ನು ಕಂಡಿಲ್ಲ ಎಂಬುವುದಾಗಿ ತಿಳಿಸಿದ್ದು ದರ್ಶನ್ ನೀಡಿದ ದೂರಿನಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 105/2023 ಕಲಂ : 392 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು ರಿಕ್ಷಾ ಮತ್ತು ಪ್ರಯಾಣಿಕರು ಯಾರು ಎಂಬುವುದನ್ನು ಪತ್ತೆಹಚ್ಚಲು ಪೋಲಿಸ್ ಇದೀಗ ಎಲ್ಲಾ ಮೂಲಗಳಿಂದ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!