ದೃಷ್ಠಿ ಮೀಡಿಯಾ ನಿರ್ಮಾಣದ
ರವಿಕೆ ಪ್ರಸಂಗ ಚಿತ್ರವು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪೂಜೆ ನೆರವೇರಿ ಚಿತ್ರೀಕರಣ ಆರಂಭಗೊಂಡು ಸುಳ್ಯದ ಪರಿಸರದಲ್ಲಿ ಸುಮಾರು ೩೦ ದಿನಗಳಕಾಲ ಚಿತ್ರಿಕರಣ ಚಿತ್ರಿಕರಣಗೊಂಡ ಸಂತೋಷ್ ಕೊಡೆಂಕೇರಿ ನಿರ್ದೇಶನದ ನೂತನ ಸಿನಿಮಾ ‘ರವಿಕೆ ಪ್ರಸಂಗ’ ಸದ್ಯದಲ್ಲಿಯೇ ತೆರೆಗೆ ಬರಲಿದೆ ಎಂದು ಸಿನಿಮಾದ ನಿರ್ದೇಶಕ ಸಂತೋಷ್ ಕೊಡೆಂಕೇರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿನಿಮಾದ ಟ್ರೈಲರ್ ಹಾಗೂ ಟೈಟಲ್ ಸಾಂಗ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತಿದೆ. ಟ್ರೈಲರ್ ಹಾಗೂ ಟೈಟಲ್ ಸಾಂಗ್ ತೀವ್ರ ಕುತೂಹಲ ಕೆರಳಿಸಿದ್ದು ಸದ್ಯ ಎಲ್ಲೆಡೆ ಟ್ರೆಂಡಿಂಗ್ ಆಗುತಿದೆ ಎಂದು ಹೇಳಿದರು.
ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಚಿತ್ರ ಸದ್ಯದಲ್ಲಿಯೇ ಸಿನಿ ಪ್ರೇಕ್ಷಕರ ಮುಂದೆ ಬರಲಿದೆ ಹೇಳಿದರು. ರವಿಕೆ ಪ್ರಸಂಗ ಸಿನಿಮವು ಹಾಸ್ಯ ಹಾಗೂ ಭಾವನಾತ್ಮಕತೆಯನ್ನು ಹೊಂದಿದ್ದು ಇದು ಪ್ರತಿ ಹೆಣ್ಣಿನ ಮನಸ್ಸಿನ ಭಾವನೆ ಹಾಗೂ ಅನುಭವಿಸುವ ಕೆಲವೊಂದು ಸನ್ನಿವೇಶಗಳ ಕುರಿತಾಗಿದ್ದು ಈ ಸಿನಿಮವನ್ನು ಕುಟುಂಬ ಸಮೇತರಾಗಿ ನೋಡಬಹುದಾದ ಮನೋರಂಜನಾತ್ಮಕ ಸಿನಿಮಾವಾಗಿದೆ ಎಂದು ಹೇಳಿದರು. ರವಿಕೆ ಪ್ರಸಂಗ ಚಿತ್ರವು ನಮ್ಮ ಒಂದು ವಿಭಿನ್ನವಾದ ಪ್ರಯೋಗವಾಗಿದ್ದು ಇದು ನಮ್ಮದೇ ಭಾಷೆಯಲ್ಲಿ ಮೂಡಿಬಂದಿದೆ ಎಂದು ಅವರು ವಿವರಿಸಿದರು.
ಚಿತ್ರದ ಕಥೆ ಹಾಗೂ ಸಂಭಾಷಣೆ ರಚಿಸಿರುವ ಪಾವನಾ ಸಂತೋಷ್ ಮಾತನಾಡಿ ‘ರವಿಕೆ ಪ್ರಸಂಗ’ ಒಂದು ಸುಂದರ ಕೌಟುಂಬಿಕ ಚಿತ್ರ. ಒಂದು ರವಿಕೆಯನ್ನು ಎಳೆಯಾಗಿ ತೆಗೆದುಕೊಂಡು ಸಾಮಾಜಿಕ ಸಂದೇಶ ನೀಡುವ ಕೌಟುಂಬಿಕ ಚಿತ್ರವಾಗಿದೆ ಹಾಸ್ಯ, ಸೆಂಟಿಮೆಂಟಲ್, ಇಮೋಷನಲ್ ಆಗಿ ಸಾಗುವ ಚಿತ್ರ. ಇದು ಪ್ರತಿ ಹೆಣ್ಣು ಮಕ್ಕಳ ಬದುಕಿನಲ್ಲಿ ಸಂಭವಿಸಬಹುದಾದ ಕಥೆ ಎಂದು ಹೇಳಿದರು ಅಲ್ಲದೇ ಎಲ್ಲರು ಮುಂದೆ ಬೆಳ್ಳಿತೆರೆಗೆ ಬಂದಾಗ ಕುಟುಂಬ ಸಮೆತರಾಗಿ ಈ ಚಿತ್ರವನ್ನು ವೀಕ್ಷಿಸಿ ಎಂದು ಮನವಿಮಾಡಿದರು.
ದೃಷ್ಠಿ ಮೀಡಿಯಾ ನಿರ್ಮಾಣದಲ್ಲಿ ರವಿಕೆ ಪ್ರಸಂಗ ಸಿನಿಮಾದ ಕಥೆ ಮತ್ತು ಸಂಭಾಷಣೆಯನ್ನು ಪಾವನಾ ಸಂತೋಷ್ ರಚಿಸಿದ್ದು ಸಂತೋಷ್ ಕೊಡೆಂಕೇರಿ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ.ಮುಖ್ಯ ಭೂಮಿಕೆಯಲ್ಲಿ ಗೀತಾ ಭಾರತಿ, ಪದ್ಮಜಾ ರಾವ್, ಸುಮನ್ ರಂಗನಾಥ್, ಪ್ರವೀಣ್ ಅಥರ್ವ, ರಾಕೇಶ್ ಮಯ್ಯಾ, ಕೃಷ್ಣಮೂರ್ತಿ ಕವತಾರ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿ ಇದೆ. ಜೊತೆಗೆ ಸುಳ್ಯದ ಸ್ಥಳೀಯ ಕಲಾವಿದರು ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಸಂತೋಷ್ ಕೊಡೆಂಕೇರಿ ಮತ್ತು ಪಾವನಾ ಸಂತೋಷ್ ಹೇಳಿದರು.
ಸಿನಿಮಾದ ಟ್ರೈಲರ್, ಟೈಟಲ್ ಸಾಂಗ್ ಹಾಗೂ ಸಿನಿಮಾದ ಹಾಡಿನ ತುಣುಕುಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರಾದ ಶಿವರುದ್ರಯ್ಯ ಎಸ್.ವಿ, ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕೇರಿ ಕುಟುಂಬ, ರವಿಕೆ ಪ್ರಸಂಗ ತಂಡದ ಸದಸ್ಯರು , ಸುಳ್ಯದ ಆಟೋ ಚಾಲಕ ಅಬ್ದುಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.
.