Ad Widget

ಸೆ.30 ರಂದು ಪ್ರಣವ ಫೌಂಡೇಶನ್ ವತಿಯಿಂದ ಸುಳ್ಯದಲ್ಲಿ ಗುರುವಂದನೆ ಕಾರ್ಯಕ್ರಮ- 60 ಮಂದಿ ಶಿಕ್ಷಕರಿಗೆ ಸನ್ಮಾನ.

ಬೆಂಗಳೂರಿನ ಪ್ರಣವ ಫೌಂಡೇಶನ್ ವತಿಯಿಂದ ಶಿಕ್ಷಕರ ದಿನಾಚರಣೆಯ ಸೆ‌.30 ರಂದು ‘ಗುರುವಂದನಾ’ ಕಾರ್ಯಕ್ರಮ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ 60 ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ‌‌ ಸಂಯೋಜಕರಾದ‌ ಮಹೇಶ್ ಕುಮಾರ್ ರೈ ಮೇನಾಲ ಹಾಗೂ ಪ್ರಣವ ಫೌಂಡೇಶನ್‌ನ ಕಾರ್ಯದರ್ಶಿ ನಾಗರಾಜ್ ಹೆಬ್ಬಾಳ್ ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ

. . . . . .

ಮಹೇಶ್ ರೈ ಮೇನಾಲ ಈ ಬಾರಿ ಶಿಕ್ಷಕರನ್ನು ಗೌರವಿಸುವ ನಿಟ್ಟಿನಲ್ಲಿ ಸುಳ್ಯ ಕ್ಷೇತ್ರದಲ್ಲಿ ಅನುದಾನಿತ, ಅನುದಾನರಹಿತ, ಸರಕಾರಿ ಶಾಲೆ ಸೇರಿ ಒಟ್ಟು 20 ಶಿಕ್ಷಕರನ್ನು, ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ 20 ಮಂದಿ ಅಂಗನವಾಡಿ ಕಾರ್ಯಕರ್ತೆಯವರನ್ನು, 20 ಮಂದಿ ವಿಕಲಾಂಗಚೇತನರ ಶಿಕ್ಷಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಶಾಸಕಿ ಭಾಗೀರಥಿ ಮುರುಳ್ಯ ಸನ್ಮಾನ ನೆರವೇರಿಸುವರು. 20 ಮಂದಿ ಶಿಕ್ಷಕರನ್ನು ಶಿಕ್ಷಣ ಇಲಾಖೆಯವರೇ ಗುರುತಿಸಲಿದ್ದಾರೆ ಎಂದವರು ವಿವರ ನೀಡಿದರು.

ಪ್ರಣವ ಫೌಂಡೇಶನ್‌ನ ಸ್ಥಾಪಕ ಕಾರ್ಯದರ್ಶಿ ನಾಗರಾಜ್ ಹೆಬ್ಬಾಳ್ ಮಾತನಾಡಿ ‘ಪ್ರಣವ ಫೌಂಡೇಶನ್ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಕಾಲದಲ್ಲಿ ಸಂದರ್ಭದಲ್ಲಿ ಫೌಂಡೇಶನ್ ಆರಂಭವಾಯಿತು. ಅಲ್ಲಿಂದ ನಿರಂತರ ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದೇವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದು, ಕೊರೊನಾ ಸಂದರ್ಭದಲ್ಲಿ ಸುಳ್ಯ ಭಾಗದಲ್ಲಿ ಮೆಡಿಸಿನ್ ಕಿಟ್, ಆಕ್ಸಿಜನ್ ಕಾನ್ಸನ್‌ಟೇಟರ್ ನೀಡಲಾಗಿದೆ. ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮೆಷಿನ್ ಕೊಡುಗೆಯಾಗಿ ನೀಡಲಾಗಿದೆ. ಶಾಲೆಗಳಿಗೆ ಒಟ್ಟು 46 ಡಿಜಿಟಲ್ ಕ್ಲಾಸ್ ರೂಂಗಳನ್ನು ನೀಡಲಾಗಿದ್ದು ಸುಳ್ಯ ತಾಲೂಕಿನಲ್ಲಿ 21 ಡಿಜಿಟಲ್ ಕ್ಲಾಸ್ ರೂಂ ನೀಡಲಾಗಿದೆ. ಶಾಲೆಗಳಿಗೆ ಲ್ಯಾಪ್ ಟಾಪ್ ನೀಡಲಾಗಿದೆ ಎಂದವರು ವಿವರ ನೀಡಿದರು.

ಪ್ರಣವ ಸಂಸ್ಥೆಯಿಂದ ಸುಳ್ಯ ತಾಲೂಕಿನಲ್ಲಿ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ. 25 ಬೆಡ್‌ನ ಸುಸಜ್ಜಿತ ಆಸ್ಪತ್ರೆ ನಿಂತಿಕಲ್ಲಿನಲ್ಲಿ ನಿರ್ಮಿಸಲು ಯೋಜನೆ ಇದೆ. ಅದಕ್ಕಾಗಿ ಜಾಗ ಗುರುತಿಸಿದ್ದು ಶಾಸಕರ ನೇತೃತ್ವದಲ್ಲಿ ಕೆಲಸ ನಿರ್ವಯಿಸಲು ಚಿಂತನೆ ನಡೆಸಲಾಗಿದೆ ಎಂದು ಮಹೇಶ್ ರೈ ಮೇನಾಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಣವ ಫೌಂಡೇಶನ್‌ನ ಟ್ರಸ್ಟಿ ಮಂಜುನಾಥ ಭಟ್ ಇದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!