Ad Widget

ನನ್ನ ಮಣ್ಣು-ನನ್ನ ದೇಶ ಅಭಿಯಾನ: ವಿವಿಧ ಕ್ಷೇತ್ರಗಳಿಂದ ಹಾಗೂ ಪುಣ್ಯ ಭೂಮಿಯಿಂದ ಮೃತ್ತಿಕೆ ಸಂಗ್ರಹ


ನನ್ನ ಮಣ್ಣು-ನನ್ನ ದೇಶ ಅಭಿಯಾನ ಸೆ.18ರಂದು ಸುಳ್ಯದಲ್ಲಿ ನಡೆಯಿತು.ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹುತಾತ್ಮ ಸ್ವಾತಂತ್ರ್ಯ ಯೋಧರನ್ನು ಹಾಗೂ ರಕ್ಷಣಾ ಭದ್ರತಾ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸುವ ಕೇಂದ್ರ ಸರಕಾರದ ಮಹತ್ವದ ಯೋಜನೆ ‘ಅಮೃತವನ ಉದ್ಯಾನವನ’ ದೆಹಲಿಯಲ್ಲಿ ನಿರ್ಮಾಣಗೊಳ್ಳಲಿದೆ. ಆ ಪ್ರಯುಕ್ತ ದೇಶದ ಎಲ್ಲಾ ಭಾಗಗಳಿಂದ ಮಣ್ಣನ್ನು ಸಂಗ್ರಹಿಸಿ ಬಳಸಿಕೊಳ್ಳುವ ಯೋಜನೆ ಸಲುವಾಗಿ ಸುಳ್ಯದ ವಿವಿಧ ಧಾರ್ಮಿಕ ಪುಣ್ಯಕ್ಷೇತ್ರಗಳಿಂದ ಹಾಗೂ ಹುತಾತ್ಮ ಸ್ವಾತಂತ್ರ್ಯ ಯೋಧರ ವೀರ ಸೇನಾನಿಗಳ ಪುಣ್ಯಭೂಮಿಯಿಂದ ಮೃತ್ತಿಕೆಯನ್ನು ತಂದು ಪೂಜಿಸಿ ಭಕ್ತಿ ಗೌರವಗಳಿಂದ ಕಲಶದಲ್ಲಿ ಸಂಗ್ರಹಿಸುವ ಯೋಜನೆ ಇದಾಗಿದೆ. ಸೆಪ್ಟೆಂಬರ್-18 ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಹರೀಶ ಕಂಜಿಪಿಲಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾ‌ರು ರಾಧಾಕೃಷ್ಣ ರೈ, ನಿವೃತ್ತ ಸೇನಾ ಯೋಧ ಸುಬೇದಾರ್ ವಾಸುದೇವ ಬಾನಡ್ಕ, ವಿವಿಧ ದೇವಸ್ಥಾನಗಳ ಪ್ರಮುಖರಾದ ಪಿ.ಕೆ.ಉಮೇಶ್, ಜಯರಾಮ ರೈ ಜಾಲ್ಲೂರು, ಮೋಹನ್ ರಾಮ್ ಸುಳ್ಳಿ, ಕಿಶೋರ್ ಕುಮಾರ್ ಉಳುವಾರು, ಕೇಶವ ಮೂರ್ತಿ ಹೆಬ್ಬಾರ್, ಬೂಡು ರಾಧಾಕೃಷ್ಣ ರೈ, ವಸಂತ ನಡುಬೈಲು, ರಾಘವ ಕಂಜಿಪಿಲಿ, ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಸಂತೋಷ್ ಕುತ್ತಮೊಟ್ಟೆ, ಚನಿಯ ಕಲ್ತಡ್ಕ, ಸುನಿಲ್ ಕೇರ್ಪಳ, ವಿನಯಕುಮಾರ್ ಮುಳುಗಾಡು, ಕೇಶವ ಅಡ್ತಲೆ
ಮುಂತಾದವರುಉಪಸ್ಥಿತರಿದ್ದರು. ಅಲ್ಲದೆ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

. . . . . .

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ,ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಸ್ವಾತಂತ್ರ್ಯ ಯೋಧ ಕೆದಂಬಾಡಿ ರಾಮಯ್ಯ ಗೌಡರ ಮನೆಯಿಂದ,ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನ ಸುಳ್ಯ,
ಶ್ರೀ ಕಲ್ಕುಡ ದೈವಸ್ಥಾನ ಸುಳ್ಯ ಬೂಡು ಶ್ರೀ ಭಗವತಿ ದೈವಸ್ಥಾನ ಸೇರಿ ವಿವಿಧ ಕ್ಷೇತ್ರಗಳಿಂದ ಹಾಗೂ ಪುಣ್ಯ ಭೂಮಿಯಿಂದ ಮೃತ್ತಿಕೆಯನ್ನು ಸಂಗ್ರಹಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!