ಸುಬ್ರಹ್ಮಣ್ಯ ಹಾಲು ಉತ್ಪಾದಕ ಮಹಿಳಾ ಸಹಕಾರಿ ಸಂಘದ 2020 23ನೇ ಸಾಲಿನ ಮಹಾಸಭೆಯು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೆ.18 ರಂದು ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಶೋಭಾ ನಲ್ಲೂರಾಯ ವಹಿಸಿದ್ದರು. ಪ್ರಸಕ್ತ ವರ್ಷ ಮಹಿಳಾ ಸಹಕಾರಿ ಸಂಘಕ್ಕೆ ರೂ. 202606.17 ಲಾಭಾಂಶ ಬಂದಿದ್ದು,ಪ್ರತಿ ಲೀಟರಿಗೆ ರೂ 1.32 ರಂತೆ ಬೋನಸ್ ಹಾಗೂ ಸಂಘದ ಪ್ರತಿ ಸದಸ್ಯರಿಗೆ ಶೇ. 10 ಡಿವಿಡೆಂಡನ್ನು ನೀಡುವೆಂದು ಘೋಷಣೆ ಮಾಡಲಾಯಿತು. ಸಂಘಕ್ಕೆ ಹಾಲು ಹಾಕುವ ಸದಸ್ಯರುಗಳ ಮಕ್ಕಳಿಗೆ ಎಸ್. ಎಸ್. ಎಲ್. ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿದ್ದ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಸದಸ್ಯರುಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಶುದ್ಧ ಹಾಲು ಉತ್ಪಾದನೆ, ಪಶು ಸಾಕಾಣಿಕೆ, ಸಮಸ್ಯೆಗಳ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಪುಷ್ಪ ವರದಿ ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಪ್ರೇಮ ಎನ್ ಬಿ, ಹಾಗೂ ನಿರ್ದೇಶಕರುಗಳಾದ ಲಲಿತ, ಸುಮಿತ್ರ , ಅಮಣ್ಣಿ ,ಕಮಲ, ಲತಾ ಪಿ, ಲಲಿತ ಎನ್ ,ಭವ್ಯ ,ಹರಿಣಾಕ್ಷಿ, ಸೀತಮ್ಮ ಉಪಸ್ಥಿತರಿದ್ದರು. ಸವಿತಾ ಭಟ್ ಪ್ರಾರ್ಥಿಸಿದರು. ಶೋಭಾ ನಲ್ಲೂರಾಯ ಸ್ವಾಗತಿಸಿ, ಹೇಮಾವತಿ ವಂದಿಸಿದರು.
- Friday
- November 1st, 2024