Ad Widget

ದೇವಚಳ್ಳ : ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ

ಗುತ್ತಿಗಾರು ವಲಯದ ದೇವಚಳ್ಳ ಕಾರ್ಯ ಕ್ಷೇತ್ರದಲ್ಲಿ  ರೈತ ಕ್ಷೇತ್ರ ಪಾಠಶಾಲೆ( ಕೃಷಿ ತರಬೇತಿ) ಕಾರ್ಯಕ್ರಮ ಹರ್ಲಡ್ಕ ಧನಂಜಯರವರ ಮನೆಯಲ್ಲಿ ಸೆ.17 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಭಾನುಪ್ರಕಾಶ ತಳೂರು ವಹಿಸಿದ್ದರು.‌ ಧನಂಜಯ ಹರ್ಲಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದಯಾ ಪ್ರಕಾಶ್ ಚೀಮುಳ್ಳು,  ಶ್ಯಾಂ ಪ್ರಸಾದ್ ಗೊರಗೋಡಿ, ಜಗದೀಶ ಪರಮಲೆ ಯವರು ಕೃಷಿ ಜಾಗದಲ್ಲಿ ಹಣ್ಣು ಹಂಪಲು ಗಿಡ ನೆಟ್ಟು ಲಾಭಾದಾಯಕ ಬೆಳೆ ಬೆಳೆಯುವ ಬಗ್ಗೆ ಹಾಗೂ ಮಾರುಕಟ್ಟೆ ಒದಗಣೆ ಮತ್ತು ಸಮಗ್ರ ಕೃಷಿ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ಮಾಗ೯ದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು ಹಾಗೂ ಆಸಕ್ತ ಕೃಷಿಕರು ಭಾಗವಹಿಸಿದ್ದರು. ಮಾವಿನಕಟ್ಟೆ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಭಾಗೀರಥಿ  ಸ್ವಾಗತಿಸಿದರು.  ತಾಲೂಕು ಕೃಷಿ ಅಧಿಕಾರಿ  ರಮೇಶ್  ಪ್ರಾಸ್ತಾವಿಕ ನುಡಿಗಳನ್ನಾಡಿದರು.   ಗುತ್ತಿಗಾರು ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಲೋಕೇಶ್ವರ ಡಿ. ಆರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading