ಸುಳ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಉತ್ತಮವಾಗಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದು ಸದಸ್ಯರ ದ್ಯೇಯೋದ್ದೇಶವನ್ನು ಪೂರೈಸಿಕೊಂಡು ವಿಶ್ವಾಸ ಪೂರ್ಣ ಸೇವೆ ನೀಡುತ್ತಿದೆ. ಅದೇ ರೀತಿ ಸದಸ್ಯರು ಕೂಡಾ ಸಂಘದ ಅಭ್ಯುದಯಕ್ಕಾಗಿ ಸಹಕಾರ ನೀಡಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಸೆ.16 ರಂದು ಸುಳ್ಯ ಸಿ.ಎ.ಬ್ಯಾಂಕ್ ನ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಸಂಘದ ಸದಸ್ಯರಾಗಿದ್ದು ಹೈನುಗಾರಿಕೆ ಮತ್ತು ಭತ್ತದ ಕೃಷಿಯಲ್ಲಿ ಸಾಧನೆಗೈದ ಕೃಷಿಕರನ್ನು ಸನ್ಮಾನಿಸಿ ಮಾತನಾಡಿದರು. ಸಿ.ಎ.ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆಯವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟುರನ್ನು ಗೌರವಿಸಲಾಯಿತು.
ಭತ್ತ ಕೃಷಿ ಬೆಳೆಯುವ ರಾಮಚಂದ್ರ ಗೌಡ ಭಟ್ರಮಕ್ಕಿ, ಸೀತಾರಾಮ ಎ.ಕೆ. ಅಡ್ಪಂಗಾಯ, ಜಯರಾಮ ಭಾರದ್ವಾಜ್, ಮನಮೋಹನ ಪುತ್ತಿಲ, ರಾಧಾಕೃಷ್ಣ ರೈ ಬೂಡು, ವಿಜಯಕುಮಾರ್ ಪಡ್ಪು, ಕಿಶೋರ್ ಕುಮಾರ್ ರನ್ನು ಹಾಗು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಪುರುಷೋತ್ತಮ ಕೊಯಿಕುಳಿ, ನರೇನ್ ಪ್ರಭು ಕಾಂತಮಂಗಲ, ಪ್ರಕಾಶ್ ಕುಮಾರ್ ಮುಳ್ಯ, ದುರ್ಗೇಶ್ ಅಡ್ಪಂಗಾಯ, ದೇವರಾಜ್ ಆಳ್ವ, ಮಹಮ್ಮದ್ ಅಶ್ರಫ್ ಸಿ.ಹೆಚ್. ರನ್ನು ಸನ್ಮಾನಿಸಲಾಯಿತು.
ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ಯಲ್ಲಿ ಅತ್ಯುತ್ತಮ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಶತಾಬ್ದಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಎಂ.ಬಿ.ಬಿ.ಎಸ್. ವಿದ್ಯಾಭ್ಯಾಸಕ್ಕೆ ಆಯ್ಕೆಯಾದ ಬಯಂಬು ಕಾಲೊನಿಯ ರಕ್ಷಿತ್ ರ ವಿದ್ಯಾಭ್ಯಾಸಕ್ಕೆ ಸಹಾಯವಾಗಿ ರೂ.10 ಸಾವಿರ ನೀಡಲಾಯಿತು. ರಕ್ಷಿತ್ ಮನೆಯವರು ಸಹಾಯದನ ಸ್ವೀಕಾರ ಮಾಡಿದರು.
ಸಂಘದ ಉಪಾಧ್ಯಕ್ಷ ಶೀನಪ್ಪ ಬಯಂಬು, ನಿರ್ದೇಶಕರುಗಳಾದ ಹರೀಶ್ ಬೂಡುಪನ್ನೆ, ವೆಂಕಟ್ರಮಣ ಮುಳ್ಯ, ನವೀನ್ ಕುಮಾರ್ ಕೆ.ಎಂ., ವಾಸುದೇವ ನಾಯಕ್, ಹೇಮಂತ್ ಕೆ.ಆರ್., ಶ್ರೀಮತಿ ಸುಮತಿ ರೈ, ಶ್ರೀಮತಿ ಹರಿಣಿ ಸದಾನಂದ, ಅಬ್ದುಲ್ ಕುಂಞಿ ನೇಲ್ಯಡ್ಕ, ದಾಮೋದರ ಮಂಚಿ, ಜಯರಾಮ ಪಿ.ಜಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್.ಪಿ. ಇದ್ದರು.