ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ 53ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.19ರಿಂದ ಸೆ.23 ವರೆಗೆ ಕುಕ್ಕೆಸುಬ್ರಹ್ಮಣ್ಯದ ಉತ್ತರಾದಿ ಮಠದಲ್ಲಿ ವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.ಅಲ್ಲದೆ ಸಾಂಸ್ಕೃತಿಕ ಮನೋರಂಜನೆಗಳು ಕುಕ್ಕೆಶ್ರೀ ಕಲಾವೇದಿಕೆಯಲ್ಲಿ ಜರುಗಲಿದೆ.ಈ ಬಾರಿ ಪ್ರಪ್ರಥಮವಾಗಿ ಸೆ.23ರಂದು ನಡೆಯುವ ಗಣಪತಿ ಶೋಭಾಯಾತ್ರೆಗೆ ಸ್ತಬ್ಧಚಿತ್ರ ಸ್ಪರ್ಧೆ ನಡೆಯಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಸ್ತಬ್ದಚಿತ್ರವನ್ನು ಆಯೋಜಿಸಿ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿ ಸಹಕರಿಸಬೇಕು ಎಂದು ಸಮಿತಿಯ ಅಧ್ಯಕ್ಷ ದಿನೇಶ್ ಸಂಪ್ಯಾಡಿ ವಿನಂತಿಸಿದ್ದಾರೆ.
ಸೆ.19ರಂದು ಮಂಗಳವಾರ ಬೆಳಗ್ಗೆ 9.00ಗಂಟೆಗೆ ವಿಗ್ರಹ ಪ್ರತಿಷ್ಠಾಪನೆ, ನಂತರ 108 ತೆಂಗಿನಕಾಯಿ ಗಣಪತಿ ಹೋಮ.ಅಲ್ಲದೆ ಪ್ರತಿದಿನ ಗಣಪತಿಹೋಮ ನೆರವೇರಲಿದೆ. ಬಳಿಕ ಮಹಾಪೂಜೆ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು, ಸಂಜೆ ಕುಕ್ಕೆಶ್ರೀ ಭಜನಾ ಮಂಡಳಿಯವರಿAದ ಭಜನೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುನಾದ ಸಂಗೀತ ಕಲಾಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿಗಾನ ಮತ್ತು ವೈಷ್ಣವಿ ಸ್ಕೂಲ್ ಆಪ್ ಡ್ಯಾನ್ಸ್ ತಂಡದಿಂದ ನೃತ್ಯ ಸಂಗಮ ನಡೆಯಲಿದೆ.
ಸೆ.20ರಂದು ಬುಧವಾರ ಮದ್ಯಾಹ್ನ 2ಗಂಟೆಯಿಂದ ವಿವಿಧ ಆಟೋಟ ಸ್ಪರ್ಧೆಗಳು, ನಂತರ ಶ್ರೀವಲ್ಲಿ ಭಜನಾ ಮಂಡಳಿ ಸುಬ್ರಹ್ಮಣ್ಯ ಇವರಿಂದ ಭಜನೆ.ಬಳಿಕ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕುಮಾರಸಂಭ್ರಮ, ಬಳಿಕ ನೃತ್ಯರಂಗ ಡ್ಯಾನ್ಸ್ ಅಕಾಡೆಮಿ ಹೊಸಬೆಟ್ಟು ಇವರಿಂದ ನೃತ್ಯ ವೈಭವ ಪ್ರದರ್ಶಿತವಾಗಲಿದೆ.
ಸೆ.21ರಂದು ವಿವಿಧ ಆಟೋಟ ಸ್ಪರ್ಧೆಗಳು, ಬಳಿಕ ಸಂಜೆ ವಿದ್ಯಾಸಾಗರ ಭಜನಾ ಸಂಗಮ ಸುಬ್ರಹ್ಮಣ್ಯ ಇವರಿಂದ ಭಜನೆ, ಬಳಿಕ ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಕ್ಷಿತ್ ರಾಮಕುಂಜ ಇವರಿಂದ ಹಾಸ್ಯಮಯ ಮಿಮಿಕ್ರಿ, ಬಳಿಕ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಅಲೇ ಬುಡಿಯೆರ್‌ಗೆ ತುಳು ನಾಟಕ ಪ್ರದರ್ಶಿತವಾಗಲಿದೆ.
ಸೆ.22ರಂದು ಸಂಜೆ 4 ಗಂಟೆಯಿಂದ ಧಾರ್ಮಿಕ ಸಭೆ ನಡೆಯಲಿದೆ. ಸಭೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ.ಪಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ.ಎಸ್.ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಮುಖ್ಯ ಅತಿಥಿಗಳಾಗಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ದಿನೇಶ್ ಸಂಪ್ಯಾಡಿ ವಹಿಸಲಿದ್ದಾರೆ. ಬಳಿಕ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಜನಪದೀಯ ನೃತ್ಯ ಸೀಂಚನ, ಬಳಿಕ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರಿಂದ ಯಕ್ಷಗಾನ ಬಯಲಾಟ ಲೋಕಾಭಿರಾಮ ಪ್ರದರ್ಶಿತವಾಗಲಿದೆ. ಸೆ.23ರಂದು ಬೆಳಗ್ಗೆ ಕಲಾವಿದ ಯಜ್ಞೇಶ್ ಆಚಾರ್ ಅವರಿಂದ ಭಕ್ತಿ ಸಂಗೀತ, ಬಳಿಕ ಅಕ್ಷರಾ ಗಾನಸುಧಾ ತಂಡದಿಂದ ಇವರಿಂದ ಭಕ್ತಿ ಭಾವಗಾಯನ ನಡೆಯಲಿದೆ.
ಸ್ತಬ್ಧಚಿತ್ರ ಸ್ಪರ್ಧೆ:
ಬಳಿಕ ಸಂಜೆ ಮೂರು ಗಂಟೆಗೆ ಸಪ್ತಾಶ್ವದ ಬೆಳ್ಳಿರಥದಲ್ಲಿ ಗಣಪತಿ ಶೋಭಾಯಾತ್ರೆ ನಡೆಯಲಿದೆ.ಈ ಸಂದರ್ಭ ಪ್ರಪ್ರಥಮ ಬಾರಿಗೆ ಸ್ತಬ್ದಚಿತ್ರ ಸ್ಪರ್ಧೆ ನಡೆಯಲಿದೆ.ಪ್ರಥಮ ರೂ.25 ಸಾವಿರ, ದ್ವಿತೀಯ ರೂ.15 ಸಾವಿರ, ತೃತೀಯ ರೂ.8000 ಮತ್ತು ಚತುರ್ಥ ರೂ.5 ಸಾವಿರ ಬಹುಮಾನ ನೀಡಲಾಗುವುದು.ಮೆರವಣಿಗೆಯಲ್ಲಿ ಕುಸಾಲ್ದ ಜವನೇರ್ ವಾಟ್ಸ್ ಆಪ್ ಗ್ರೂಪ್ ಪ್ರಾಯೋಜಕತ್ವದಲ್ಲಿ ಬೇರಿಪದವು ಮೂಕಾಂಬಿಕಾ ವ್ಯಾಯಾಮ ಶಾಲೆ ಇವರಿಂದ ಸಾಹಸಮಯ ತಾಲೀಮ್, ಸುಮಾರು 150 ಜನರಿಂದ ಮತ್ತು ವಿದ್ಯಾರ್ಥಿಗಳಿಂದ ಕುಣಿತ ಭಜನೆಯೊಂದಿಗೆ ಶ್ರೀ ಗಣಪತಿ ದೇವರ ಶೋಭಾಯಾತ್ರೆ ನಡೆದು ಕುಮಾರಧಾರ ನದಿಯಲ್ಲಿ ಜಲಸ್ಥಂಭನ ನೆರವೇರಲಿದೆ.
- Friday
- November 1st, 2024