ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ನೂರು ದಿನಗಳಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯನ್ನು ಈಡೇರಿಸುವ ಬದ್ಧತೆಯನ್ನ ತೋರಿಸಿ ರೈತಪರವಾದ ಸರ್ಕಾರ ಎಂಬುವುದನ್ನು ಸಾಬೀತುಪಡಿಸಿದೆ. 0% ಗೆ ರೂ. 3 ಲಕ್ಷದವರೆಗೆ ಕೊಡುತ್ತಿದ್ದ ಬೆಳೆ ಸಾಲದ ಮಿತಿಯನ್ನು ರೂ. 5 ಲಕ್ಷಕ್ಕೆ ಏರಿಸಿದೆ. ಅದರ ಜೊತೆಗೆ 3% ಬಡ್ಡಿದರದಲ್ಲಿ ನೀಡುತ್ತಿದ್ದ ದೀಘ್ರಾವಧಿ ಸಾಲದ ಮಿತಿಯನ್ನು ರೂ. 10 ಲಕ್ಷದಿಂದ ರೂ. 15 ಲಕ್ಷಕ್ಕೆ ಏರಿಸಿದೆ. ಇದು ಏಪ್ರಿಲ್ ನಿಂದಲೇ ಜಾರಿಗೆ ಬರುವಂತೆ ಅದೇಶಿಸಿದೆ. ಇದರಿಂದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗ ರೈತ ಪರವಾದ ನಿರ್ಧಾರಗಳನ್ನು ಮಾಡುತ್ತಿರುವುದು ಸಾಬೀತಾಗಿದೆ. ಕಾಂಗ್ರೆಸ್ ಸರ್ಕಾರವು ಯಾವತ್ತೂ ನುಡಿದಂತೆ ನಡೆಯುತ್ತದೆ. ಕಾಂಗ್ರೆಸ್ ರೈತ ವಿರೋಧಿ ಎಂದು ಪ್ರತಿಭಟನೆಯ ನಾಟಕವಾಡಿದ ಬಿ.ಜೆ.ಪಿ ಇನ್ನಾದರೂ ಸತ್ಯವನ್ನರಿತು ಮಾತನಾಡಲಿ ಎಂದು ಪತ್ರಿಕಾ ಹೇಳಿಕೆಯಲ್ಲಿ ಪಿ.ಸಿ ಜಯರಾಮ್ ಹಾಗೂ ಪಿ.ಎಸ್. ಗಂಗಾಧರ್ ತಿಳಿಸಿದ್ದಾರೆ.
- Friday
- November 1st, 2024