ರಿಕ್ಷಾವೊಂದರಲ್ಲಿ ಅಕ್ರಮವಾಗಿ ನಿಷೇದಿತ ಗಾಂಜಾ ಸಾಗಾಟ ಮಾಡುತ್ತಿದ್ದ ಸುಳ್ಯದ ವ್ಯಕ್ತಿ ಹಾಗೂ ರಿಕ್ಷಾದಲ್ಲಿದ್ದ 6 ಕೆ ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಸೆ.16 ರಂದು ವಿಟ್ಲ ಸಮೀಪ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ, KA-21-B-7248 ನಂಬರಿನ ಅಟೋರಿಕ್ಷಾದಲ್ಲಿ ಸುಳ್ಯ ಕಸಬಾ ಗ್ರಾಮ ಸುಳ್ಯ ನಿವಾಸಿಯಾದ ಎನ್ ಎಂ ಮಹಮ್ಮದ್ ಕಲಂದರ್ ಶಾ (36) ಅಕ್ರಮವಾಗಿ ನಿಷೇದಿತ ಮಾದಕ ವಸ್ತುವಾದ ಗಾಂಜಾ ಸಾಗಿಸುತ್ತಿರುವುದನ್ನು ವಿಟ್ಲ ಠಾಣಾ ಪೊಲೀಸರು ಪತ್ತೆಹಚ್ಚಿದ್ದರು. ರಿಕ್ಷಾದಲ್ಲಿದ್ದ 6.110 ಕೆ ಜಿ ತೂಕದ ಗಾಂಜ (ಅಂದಾಜು 1,35,000/- ರೂಪಾಯಿ) ಎರಡು ಮೊಬೈಲ್ ಫೋನ್, ಅಟೋರಿಕ್ಷಾ ಸಹಿತ ಆರೋಪಿಯನ್ನು ಬಂದಿಸಿದ್ದಾರೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,96,900 ರೂ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
- Friday
- November 1st, 2024