ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತ್ತಡ್ಕ ಇದರ ಆಶ್ರಯದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಭಾಗಿತ್ವದೊಂದಿಗೆ ಸೆ.18 ರಿಂದ ಸೆ.20 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 14ನೇ ವರ್ಷದ ಶ್ರೀ ಗಣೇಶೋತ್ಸವವು ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಸೆ.18 ಸೋಮವಾರದಂದು ಬೆಳಿಗ್ಗೆ 9:05 ಕ್ಕೆ ಶ್ರೀ ಗೌರಿ ಮೂರ್ತಿ ಪ್ರತಿಷ್ಠಾಪನೆ ನಂತರ ಗೌರಿ ಪೂಜೆ ನಡೆಯಲಿದೆ. ಸಂಜೆ 6:00 ರಿಂದ ಶ್ರೀ ದುರ್ಗಾ ಭಜನಾ ಮಂಡಳಿ ಬಾಳುಗೋಡು ಹಾಗೂ ಶ್ರೀ ದುರ್ಗಾ ಭಜನಾ ಮಂಡಳಿ ನಡುಗಲ್ಲು-ಮರಕತ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8:00 ರಿಂದ ಶ್ರೀ ಗೌರಿ ದೇವಿಗೆ ಮಹಾಪೂಜೆ ನಡೆಯಲಿದೆ.
ಸೆ.19 ಮಂಗಳವಾರದಂದು ಪೂರ್ವಾಹ್ನ 9:20 ಕ್ಕೆ ಶ್ರೀ ಗಣೇಶ ಮೂರ್ತಿ ಪ್ರತಿಷ್ಠೆ ನಂತರ ಶ್ರೀ ಗಣಪತಿ ಪೂಜೆ, ಸಾಮೂಹಿಕ ಗರಿಕೆ ಹವನ, 12:30 ಕ್ಕೆ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6:00 ರಿಂದ ಶ್ರೀ ಚಾಮುಂಡೇಶ್ವರಿ ಭಜನಾ ತಂಡ ಹರಿಹರ ಪಲ್ಲತ್ತಡ್ಕ ಹಾಗೂ ಶ್ರೀ ಹರಿಹರೇಶ್ವರ ಭಜನಾ ತಂಡ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ತಿರುಮಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ನಂತರ ರಾತ್ರಿ 8:30 ಕ್ಕೆ ಮಹಾಪೂಜೆ ನಡೆಯಲಿದೆ. ಸಂಜೆ 7:30 ರಿಂದ ರಚಿತಾ ಇಜಿಲುಮಕ್ಕಿ ಗುತ್ತಿಗಾರು ಸಾರಥ್ಯದ “ನೃತ್ಯ ಸಾರಾಂಗ ಕಲಾ ಕುಟೀರ” ಪ್ರಸ್ತುತಪಡಿಸುವ ಸಾಂಸ್ಕೃತಿಕ ನೃತ್ಯ ವೈಭವ ಹಾಗೂ ರೂಪಕ ನಡೆಯಲಿದೆ.
ಸೆ.20 ಬುಧವಾರದಂದು ಬೆಳಿಗ್ಗೆ 8:00 ಗಂಟೆಗೆ ಶ್ರೀ ಗಣಪತಿ ದೇವರ ಪ್ರಾತಃಕಾಲ ಪೂಜೆ, ಬೆಳಿಗ್ಗೆ 10 ಗಂಟೆಗೆ ಶ್ರೀ ಗೌರಿ ಮತ್ತು ಗಣೇಶ ದೇವರ ಮೆರವಣಿಗೆ ನಡೆಯಲಿದ್ದು, ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಹೊರಟು ಚೆಂಡೆ ವಾದನದೊಂದಿಗೆ ಕುಣಿತ ಭಜನೆ, ಗೊಂಬೆ ಕುಣಿತದ ಆದ್ಧೂರಿ ಮೆರವಣಿಗೆಯೊಂದಿಗೆ ಐನೆಕಿದು, ಕೋಟೆ, ಬಾಳುಗೋಡು ಮಾರ್ಗವಾಗಿ ಹರಿಹರ ಪೇಟೆಗೆ ಬಂದು ಸಂಗಮ ಕ್ಷೇತ್ರದಲ್ಲಿ 5:45 ರ ಪ್ರದೋಶ ಕಾಲದಲ್ಲಿ ಶ್ರೀ ಗೌರಿ ಮತ್ತು ಗಣಪತಿ ದೇವರ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದು.(ವರದಿ : ಉಲ್ಲಾಸ್ ಕಜ್ಜೋಡಿ)
- Saturday
- November 23rd, 2024