ಸುಳ್ಯದ ರಥಬೀದಯಲ್ಲಿ ಕಸ ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿದ ನಗರ ಪಂಚಾಯತ್ ಅವರಿಗೆ ರೂ.2 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿರುವ ಘಟನೆ ವರದಿಯಾಗಿದೆ. ಜು.12 ರಂದು ರಾತ್ರಿ ಸುಳ್ಯದ ರಥಬೀದಿಯಲ್ಲಿ ವ್ಯಕ್ತಿಯೊಬ್ಬರು ಕಸವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಎಸೆದಿದ್ದರು. ಅಲ್ಲೇ ಪಕ್ಕದಲ್ಲಿದ್ದ ರಿಕ್ಷಾ ಚಾಲಕರು ಆ ಪ್ಲಾಸ್ಟಿಕ್ ಕಟ್ಟನ್ನು ಪರೀಕ್ಷಿಸಿದಾಗ ಅದರಲ್ಲಿ ವಂಶಿಕೃಷ್ಣ ಎಂದು ಬರೆದಿರುವ ಚೀಟಿ ಹಾಗೂ ಅವರ ವಿಳಾಸ ಪತ್ತೆಯಾಯಿತು.
ಬಳಿಕ ನ.ಪಂ. ನಿಂದ ವಿದ್ಯಾರ್ಥಿ ವಂಶಿಕೃಷ್ಣರಿಗೆ ನೋಟೀಸ್ ಮಾಡಲಾಯಿತು. ಸೆ.14 ರಂದು ನಗರ ಪಂಚಾಯತ್ ಗೆ ಬಂದ ಅವರಿಗೆ ರೂ.2 ಸಾವಿರ ದಂಡ ಹಾಕಿ ಎಚ್ಚರಿಕೆ ನೀಡಿ ಕಳುಹಿಸಲಾಯಿತು ಎಂದು ತಿಳಿದುಬಂದಿದೆ.
- Friday
- November 1st, 2024