Ad Widget

ಪೇರಡ್ಕ ಜುಮಾ ಮಸೀದಿ ಅಧ್ಯಕ್ಷರಾಗಿ ಟಿ.ಎಂ ಶಹೀದ್ ತೆಕ್ಕಿಲ್ ಆಯ್ಕೆ

ಅತ್ಯಂತ ಪುರಾತನ ಇತಿಹಾಸ ಪ್ರಸಿದ್ಧವಾದ ಸಂಪಾಜೆ ಗ್ರಾಮದ ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿ ಅಧ್ಯಕ್ಷರಾಗಿ ಟಿ.ಎಂ ಶಹೀದ್ ತೆಕ್ಕಿಲ್ ರವರು ಪುನರಾಯ್ಕೆಯಾಗಿದ್ದಾರೆ. 2006ರಲ್ಲಿ ಪೇರಡ್ಕ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ, ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಗೂನಡ್ಕ ಪೇರಡ್ಕ ಮದರಸ ಮಸೀದಿಯ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುತ್ತಾರೆ. ಭಾರತ ಸರಕಾರದ ಕೊಯರ್ ಬೋರ್ಡ್ ಸದಸ್ಯರಾಗಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ, ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ, ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯರಾಗಿ, ಸುಳ್ಯ ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷರಾಗಿ,ಕೆಪಿಸಿಸಿ ಕಾರ್ಯದರ್ಶಿಯಾಗಿ ದುಡಿದಿದ್ದು ಪ್ರಸ್ತುತ ಕೆಪಿಸಿಸಿ ಮುಖ್ಯ ವಕ್ತಾರರಾಗಿ, ತೆಕ್ಕಿಲ್ ಪ್ರತಿಷ್ಟಾನದ ಮತ್ತು ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿ ದುಡಿಯುತ್ತಿದ್ದು ಗ್ರಾಮೀಣ ಪ್ರದೇಶದ ಹಲವು ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿದ್ದು ಸಂಪಾಜೆ ಗ್ರಾಮದ ಅಭಿವೃದ್ಧಿಯ ಹರಿಕಾರರಾಗಿರುವ ಇವರು ಪೇರಡ್ಕದ ದರ್ಗಾ ಶರೀಪ್ ಗೆ, ಮಸೀದಿಗೆ ಹೋಗಲು ರಸ್ತೆ, ಮಸೀದಿ, ಮದರಸ, ದರ್ಗಾ ಮತ್ತು ವಕ್ಫ್ ಸ್ವತ್ತುಗಳ ರಕ್ಷಣೆಗಾಗಿ ಆವರಣಗೋಡೆ ರಚನೆ, ರೂ. 60 ಲಕ್ಷ ಕರ್ನಾಟಕ ಪ್ರವಾಸೋಧ್ಯಮ ಇಲಾಖೆಯಿಂದ ಪೇರಡ್ಕದಲ್ಲಿ ಯಾತ್ರಿಭವನ ನಿರ್ಮಾಣ, ಗೂನಡ್ಕದಿಂದ ದರ್ಕಾಸು ಪೆರುಂಗೋಡಿ ಪೇರಡ್ಕ ರಸ್ತೆ ಮತ್ತು ಸೇತುವೆ ನಿರ್ಮಾಣ ಮುಂತಾದ ಅನೇಕ ಅಭಿವೃದ್ಧಿ ಕೆಲಸಗಳೊಂದಿಗೆ ಮಸೀದಿಯ ಆಡಳಿತ ಮತ್ತು ಊರಿನ ಅಭಿವೃದ್ಧಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ ಇವರ ತಂದೆ ಟಿ ಎಂ ಬಾಬ ಹಾಜಿ ತೆಕ್ಕಿಲ್,ಅಜ್ಜ ದಿವಂಗತ ತೆಕ್ಕಿಲ್ ಮೊಹಮ್ಮದ್ ಹಾಜಿ ದೀರ್ಘ ಕಾಲ ಮಸೀದಿಯ ಅಧ್ಯಕ್ಷರಾಗಿ ಮಸೀದಿ ಪುನರ್ನಿರ್ಮಾಣ ಮತ್ತು ಪೇರಡ್ಕ ದರ್ಗಾ ಅಭಿವೃದ್ಧಿಗೆ ದುಡಿದಿದ್ದು ಕೃಷಿ ಸ್ಥಳವನ್ನು ನೀಡಿದ್ದಾರೆ .ಇವರು ಪ್ರತಿಷ್ಟಿತ ತೆಕ್ಕಿಲ್ ಮನೆತದವರು. ಮಸೀದಿಯ ಗೌರವಾಧ್ಯಕ್ಷರಾಗಿ ಟಿ ಇ ಆರಿಫ್ ತೆಕ್ಕಿಲ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕೆ. ಉಮ್ಮರ್ (ಜಡ್ಜ್ )ಗೂನಡ್ಕ , ಕೋಶಾಧಿಕಾರಿಯಾಗಿ ಪಿ.ಎ ಮಹಮ್ಮದ್ ಕುಂಇ’ ತೆಕ್ಕಿಲ್ ಪೇರಡ್ಕ , ಉಪಾಧ್ಯಕ್ಷರಾಗಿ ಟಿ.ಬಿ ಹನೀಫ್ ತೆಕ್ಕಿಲ್ ಹಾಗೂ ಜಿ.ಎಂ ಇಬ್ರಾಹಿಂ ಸೇಟ್ಯಡ್ಕ ಪೇರಡ್ಕ, ಜೊತೆಕಾರ್ಯದರ್ಶಿಗಳಾಗಿ ಕೆ.ಎಂ ಉಸ್ಮಾನ್ ಮತ್ತು ಪಿ.ಎ. ಸಿನಾನ್ (ಜಡ್ಜ್) ಗೂನಡ್ಕ, ನಿರ್ದೇಶಕರುಗಳಾಗಿ ಎಸ್ ಆಲಿ ಹಾಜಿ, ಪಾಂಡಿ ಅಬ್ಬಾಸ್, ಪಾಂಡಿ ಉಸ್ಮಾನ್, ಡಿ.ಎ. ಮೊಯಿದು, ಇಬ್ರಾಹಿಂ ಬಾತಿಷ ಸೆಟ್ಯಡ್ಕ, ಸಾಜಿದ್ ಐ ಜಿ ಗೂನಡ್ಕ ಮೊದಲಾದವರು ದುಡಿಯುತ್ತಿದ್ದಾರೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!