ಸುಳ್ಯದಲ್ಲಿ ಶನಿವಾರ ನಡೆಯಲಿರುವ ಮೊಸರು ಕುಡಿಕೆ ಉತ್ಸವ ಮತ್ತು ಗಣೇಶ ಚತುರ್ಥಿ ಆಚರಣೆ ಹಿನ್ನಲೆಯಲ್ಲಿ ಸಮಿತಿಗಳ ಪ್ರಮುಖರ ಸಭೆಯನ್ನು ಸುಳ್ಯ ಆರಕ್ಷಕ ಠಾಣೆ ಸುಳ್ಯದಲ್ಲಿ ಜರುಗಿತು. ಸುಳ್ಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ್ ಚಂದ್ರಜೋಗಿ ,ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಈರಯ್ಯ ದಂತೂರು ನೇತೃತ್ವದಲ್ಲಿ ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ಮತ್ತು ಗಣೇಶ ಚತುರ್ಥಿಯ ಪ್ರಯುಕ್ತ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗಣೇಶಮೂರ್ತಿ ಪ್ರತಿಷ್ಠಾಪನಾ ಸಮಿತಿ ಆಯೋಜಕರನ್ನು ಕರೆಸಿ ಸಭೆ ನಡೆಸಲಾಯಿತು. ಸಭೆಯಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ಸಮಯ ಅನುಸರಿಸಬೇಕಾದ ಕ್ರಮಗಳು, ಬ್ಯಾನರ್, ಬಂಟಿಂಗ್ಸ್ ಅಳವಡಿಕೆ ಮತ್ತು ಅಳವಡಿಸಿದ ಬ್ಯಾನರ್ ಬಂಟಿಂಗ್ಸ್ ತೆರವುಗೊಳಿಸುವ ಬಗ್ಗೆ ಅಲ್ಲದೇ ಅದ್ದೂರಿಗಾಗಿ ನಡೆಸುವ ಡಿಜೆ ಸೌಂಡ್ ಸಿಸ್ಟಮ್ ಅಳವಡಿಸಬಾರದು ಮತ್ತು ಕಾನೂನು ಸುವ್ಯಸ್ತೆಯನ್ನು ಕಾಪಾಡಿಕೊಳ್ಳುವಂತೆ ಸೂಕ್ತ ಮಾಹಿತಿ ನೀಡಲಾಯಿತು. ಸಭೆಯಲ್ಲಿ ಪ್ರಮುಖರಾದ ಹರೀಶ್ ಕಂಜಿಪಿಲಿ, ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷರಾದ ತೀರ್ಥಕುಮಾರ್ ಕುಂಚಡ್ಕ, ಎ ವಿ ತೀರ್ಥರಾಮ, ಸೋಮಶೇಖರ ಪೈಕ, ಸುಬೋಧ್ ಶೆಟ್ಟಿ ಮೇನಾಲ, ರಾಜೇಶ್ ಶೆಟ್ಟಿ ಮೇನಾಲ, ಚಂದ್ರ ಕೊಲ್ಚಾರ್, ರಜತ್ ಅಡ್ಕಾರ್, ಸುರೇಶ್ ಕಣೆಮರಡ್ಕ , ವರ್ಷಿತ್ ಚೊಕ್ಕಾಡಿ , ಹರಿಪ್ರಸಾದ್ ಎಲಿಮಲೆ, ನವೀನ್ ಹಾಗೂ ವಿವಿಧ ಅಷ್ಟಮಿ ಮತ್ತು ಚೌತಿ ಆಚರಣಾ ಸಮಿತಿಗಳ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
- Friday
- November 1st, 2024