ಕುಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಂಗಳೂರಿನ ಜಯನಗರದ ಉದ್ಯಮಿ ವಿಕ್ರಮ ಏ.ವಿ.ಅವರು ಸೇವಾ ರೂಪದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಎಸಿಪಿ ಕಂಪನಿಯ ಎರಡು ಬೃಹದಾಕಾರದ ಸೀಲಿಂಗ್ ಫ್ಯಾನ್(HVLS) ಗಳನ್ನು ಕೊಡುಗೆಯಾಗಿ ಶ್ರೀ ದೇವಳಕ್ಕೆ ಗುರುವಾರ ನೀಡಿರುತ್ತಾರೆ. ಕ್ಷೇತ್ರ ಪುರೋಹಿತರಾದ ಮಧುಸೂಧನ ಕಲ್ಲೂರಾಯ ರವರು ಫ್ಯಾನುಗಳಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು .ಕೊಡುಗೆಯಾಗಿ ನೀಡಿದ ಎಸಿಪಿ ಕಂಪನಿಯ ಎರಡು ಮೆಗಾ ಸೀಲಿಂಗ್ ಫ್ಯಾನ್ ಗಳ ಒಟ್ಟು ಮೊತ್ತ 3,85,000 ಹಾಗೂ ಸಿಲಿಂಗ್ ಫ್ಯಾನುಗಳು 16 ಫೀಟು ರೆಕ್ಕೆಗಳನ್ನು ಹೊಂದಿರುತ್ತವೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿರವರು ತಿಳಿಸಿರುತ್ತಾರೆ. ಒಂದು ಪ್ಯಾನ್ ಅನ್ನು ದೇವಸ್ಥಾನದ ಸನ್ನಿಧಿ ಪಕ್ಕ ತುಲಾಭಾರ , ಅನ್ನಪ್ರಾಶನ ಮಾಡುವ ಸ್ಥಳದಲ್ಲಿಯೂ ಇನ್ನೊಂದು ಫ್ಯಾನ್ ಅನ್ನು ಶ್ರೀ ದೇವಳದ ಹೊರಾಂಗಣದ ಉತ್ತರ ದ್ವಾರದ ಭಾಗದಲ್ಲೂ ಅಳವಡಿಸಲಾಗುವುದೆಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ವಿಕ್ರಂ ಹಾಗೂ ಅವರ ಪತ್ನಿಯವರನ್ನು ಶ್ರೀ ದೇವಳದ ವತಿಯಿಂದ ಗೌರವಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ವಿಕ್ರಂ ಅವರ ಪತ್ನಿ ಶ್ರೀಮತಿ ಭೂಮಿಕ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ವನಜ.ವಿ.ಭಟ್ ಹಾಗೂ ಶೋಭಾ ಗಿರಿಧರ್ ಉಪಸ್ಥಿತರಿದ್ದರು.
- Tuesday
- December 3rd, 2024