ಸುಳ್ಯ ಅಕ್ರಮ ಸಕ್ರಮ ಸಮಿತಿ ಆದೇಶದ ಪ್ರತಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬ್ಲಾಕ್ ನಾಯಕರ ವಿರುದ್ದ ಕಾರ್ಯಕರ್ತರು ಕೆಂಡಮಂಡಲರಾಗಿದ್ದಾರೆ. ಕೆಪಿಸಿಸಿ ವಕ್ತಾರರಾದ ಟಿ ಎಂ ಶಾಹೀದ್ ತೆಕ್ಕಿಲ್ ಮಾತನಾಡಿ ರಾಜ್ಯದಲ್ಲಿ ಸ್ಥಾನಮಾನಕ್ಕೆ ಮತ್ತು ಜಾತಿ ರಾಜಕೀಯಕ್ಕಾಗಿ ಇಲ್ಲಿ ಈ ರೀತಿ ಆಗಿದೆ . ಇಲ್ಲಿ ಕಾಂಗ್ರೆಸ್ ನಾಯಕರು ಸತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಲ್ಲದೇ ಇಲ್ಲಿ ಕೇವಲ ಇಬ್ಬರೇ ಪಕ್ಷವನ್ನು ನಿಯಂತ್ರಣ ಮಾಡುತ್ತಿದ್ದಾರೆ. ನಿಗಮ ಮಂಡಳಿ ನೇಮಕ , ವರ್ಗಾವಣೆಗೆ ಪತ್ರ ನೀಡಿ ಹಣ ಪಡೆದು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿದರು. ಸುಳ್ಯದ ಕೋರ್ ಕಮಿಟಿಯ ಮಂಭಾಗಕ್ಕೆ ಯಾವುದು ಬಾರದೇ ಸ್ವಜನ ಪಕ್ಷಪಾತ ಮಾಡಿದ್ದಾರೆ. ಚುನಾವಣಾ ಲೆಕ್ಕಪತ್ರವನ್ನು ಇಲ್ಲಿಯ ತನಕ ಮಂಡಿಸಿಲ್ಲ. ಸುಳ್ಯದ ಅಲ್ಪಸಂಖ್ಯಾತ ನಾಯಕರನ್ನು ಎತ್ತಿಕಟ್ಟಿ ಸ್ವಜನ ಪಕ್ಷಪಾತ ಮಾಡಲಾಗುತ್ತಿದ್ದು ಇಲ್ಲಿ
ಜಾತಿ ಪ್ರಭಾವದಿಂದ ನಿಷ್ಠಾವಂತ ಹಿರಿಯ ಮತ್ತು ಕಿರಿಯ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ, ಅಲ್ಲದೇ ನಿಗಮ ಮಂಡಳಿಯ ನೇಮಕಕ್ಕೆ ಪತ್ರ ನೀಡುವಾಗ ಭ್ರಷ್ಟಾಚಾರ ನಡೆದಿದೆ. ಕೋರ್ ಕಮಿಟಿಗೆ ತಿಳಿಯದೇ ಮಾಡಿದ್ದಾರೆ ಈ ಎಲ್ಲಾ ಕೆಲಸಗಳಿಗೆ ನೇರವಾಗಿ ಇಬ್ಬರು ಕಾರಣ ಎಂದು ಕಿಡಿಕಾರಿದರು. ಅಲ್ಲದೇ ಸುಳ್ಯದಲ್ಲಿ ಇರುವ ರಾಜ್ಯ ,ಜಿಲ್ಲೆ ,ತಾಲೂಕು , ಗ್ರಾಮ ವ್ಯಾಪ್ತಿಯ ಪಕ್ಷದ ನಾಯಕರ ನ್ನು ಹುದ್ದೆಯಿಂದ ರಾಜ್ಯ ನಾಯಕರು ವಜಾಗೊಳಿಸಬೇಕು ಅಲ್ಲದೇ ಮುಂದೆ ಸುಳ್ಯದಲ್ಲಿ ಮುಂದೆ ಯಾವುದೇ ನಾಯಕರಿಗೆ ಯಾವುದೇ ನಿಗಮ ಮಂಡಳಿ , ಸಮಿತಿಗಳಲ್ಲಿ ಸ್ಥಾನಮಾನ ನೀಡದೇ ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಗೆಲ್ಲಿಸಿದಲ್ಲಿ ಮಾತ್ರ ಸುಳ್ಯದ ನಾಯಕರುಗಳಿಗೆ ನೀಡಿದರೆ ಸಾಕು ಎಂದು ಅಗ್ರಹಿಸಿದರು.