ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ವತಿಯಿಂದ ಐದನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಸೆ. 10 ರಂದು ಅಡ್ತಲೆ ಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಡ್ತಲೆ-ಬೆದ್ರುಪಣೆ ಮಲೆ ದೈವಗಳ ಆಡಳಿತ ಸಮಿತಿಯ ಅಧ್ಯಕ್ಷರಾದ ಗಣೇಶ್ ಮಾಸ್ತರ್ ಅಡ್ತಲೆ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ತೇಜಸ್ವಿ ಕಡಪಳ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾದ ಮೋಹನ್ ಅಡ್ತಲೆ, ಶಾಲಾ ಮುಖ್ಯ ಶಿಕ್ಷಕರಾದ ಮಾಧವ ಮಾಸ್ತರ್, ಸ.ಮಾ.ಹಿ.ಪ್ರಾ.ಶಾಲೆ ಅರಂತೋಡು ಇದರ ದೈಹಿಕ ಶಿಕ್ಷಕಿಯಾದ ಶ್ರೀಮತಿ ಸರಸ್ವತಿ ಅಡ್ತಲೆ ಹಾಗೂ ಗೌರವ ಸಲಹೆಗಾರರಾದ ಭವಾನಿಶಂಕರ ಅಡ್ತಲೆ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಳಗದ ಸದಸ್ಯ ಜಗದೀಶ್ ಕಾಯರ ಸ್ವಾಗತಿಸಿ,ಜೊತೆ ಕಾರ್ಯದರ್ಶಿ ಕಿಶೋರ್ ಅಡ್ಕ ವಂದಿಸಿದರು. ರಂಜಿತ್ ಅಡ್ತಲೆ ನಿರೂಪಿಸಿದರು. ನಂತರ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷರಾದ ವಿನಯ್ ಬೆದ್ರುಪಣೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ , ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ , ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಜಯಾ ಲೋಹಿತ್ ಮೇಲಡ್ತಲೆ , ಗೌರವ ಸಲಹೆಗಾರರಾದ ಭವಾನಿಶಂಕರ ಅಡ್ತಲೆ , ನಾಗರಿಕ ಹಿತರಕ್ಷಣ ವೇದಿಕೆಯ ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ, ಶಾಲಾಭಿವೃಧ್ಧಿ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಿಂಡಿಮನೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನೂತನವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಕೇಶವ ಅಡ್ತಲೆ ಹಾಗೂ ಗ್ರಾಮದ ಭ್ರಷ್ಟ ಆಡಳಿತಾಧಿಕಾರಿಯನ್ನು ಲೋಕಾಯುಕ್ತ ಇಲಾಖೆಯ ಸುಪರ್ದಿಗೆ ಒಳಪಡಿಸಿದ ಹರಿಪ್ರಸಾದ್ ಅಡ್ತಲೆ ಇವರುಗಳನ್ನು ಸ್ಪಂದನ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ನಂತರ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಬಳಗದ ಉಪಾಧ್ಯಕ್ಷರಾದ ಲೋಹಿತ್ ಮೇಲಡ್ತಲೆ ಸ್ವಾಗತಿಸಿ, ಸದಸ್ಯ ರಂಜಿತ್ ಅಡ್ತಲೆ ನಿರೂಪಿಸಿ, ನಿರ್ದೇಶಕರಾದ ಪ್ರವೀಣ್ ಪಾನತ್ತಿಲ ವಂದಿಸಿದರು. ಸುಮಾರು ಮುನ್ನೂರಕ್ಕೂ ಆಧಿಕ ಮಂದಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.ಸ್ಪಂದನ ಗೆಳೆಯರ ಬಳಗದ ಪದಾಧಿಕಾರಿಗಳು , ಸದಸ್ಯರು,ಗೌರವ ಸಲಹೆಗಾರರು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.