ಮಡಪ್ಪಾಡಿಯ ಯುವಕ ಮಂಡಲ, ಮಂಜುಶ್ರೀ ಯಕ್ಷಗಾನ ಕಲಾ ಸಂಘ, ಶ್ರೀರಾಮ ಭಜನಾ ಮಂಡಳಿ, ಉಜ್ವಲ ಮಹಿಳಾ ಮಂಡಲ, ಶಾಲಾಭಿವೃದ್ಧಿ ಸಮಿತಿ ಮಡಪ್ಪಾಡಿ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸೆ. 10 ರಂದು ಮಡಪ್ಪಾಡಿ ಶಾಲಾ ಆಟದ ಮೈದಾನದಲ್ಲಿ ನಡೆಯಿತು. ತೇಜಸ್ವಿ ಕಡಪಳ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧನ್ಯಕುಮಾರ್ ದೇರುಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷೆ ಉಷಾಜಯರಾಮ್, ಮಡಪ್ಪಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ,ಯು.ಸಂ.ಮಂಡಳಿ ನಿರ್ದೇಶಕಿ ತುಳಸಿ ಕೇವಳ, ಮಡಪ್ಪಾಡಿ ಶಾಲಾ ಮುಖ್ಯೋಪಾಧ್ಯಾಯ ಜಗದೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಪುಟಾಣಿ ಮಕ್ಕಳ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಹಾಗೂ ಮಕ್ಕಳಿಗೆ, ಪುರುಷ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು ಮಕ್ಕಳಿಗೆ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು,18 ವರ್ಷದೊಳಗಿನ ಮಕ್ಕಳಿಗೆ ನಡೆದ ಕಬಡ್ಡಿ ಪಂದ್ಯಾಟವು ವಿಶೇಷ ಆಕರ್ಷಣೆಯಾಗಿತ್ತು. ಮಳೆಯ ನಡುವೆಯೂ ಎಲ್ಲರೂ ಆಟೋಟಗಳಲ್ಲಿ ಭಾಗವಹಿಸಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಧನ್ಯಕುಮಾರ್ ದೇರ್ಮಜಲು ವಹಿಸಿದ್ದರು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ಮಂಜುಶ್ರೀ ಯಕ್ಷಗಾನ ಕಲಾ ಸಂಘದ ಪ್ರ.ಕಾರ್ಯದರ್ಶಿ ತಾರಾನಾಥ ಅಂಬೆಕಲ್ಲು ,ಗ್ರಾ.ಪಂ.ಮಾಜಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ಹೇಮಕುಮಾರ್ ಹಾಡಿಕಲ್ಲು,ಎಸ್.ಡಿ.ಎಂ.ಸಿ ಅಧ್ಯಕ್ಷ ಸಚಿನ್ ಬಳ್ಳಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಯವಕ ಮಂಡಲ ಸದಸ್ಯರುಗಳು ಸಹಕಾರ ನೀಡಿದರು.
- Thursday
- November 21st, 2024