ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಜಾಲ್ಲೂರಿನ ಬಳಿ ತಡೆ ಹಿಡಿಯಲಾದ ಘಟನೆ ಇದೀಗ ವರದಿಯಾಗಿದೆ. ಜಾಲ್ಸೂರು ಗ್ರಾಮದ ಸ್ಥಳೀಯ ಯುವಕರು ಕಾರ್ಯಾಚರಣೆ ನಡೆಸಿ ಲಾರಿಯನ್ನು ತಡೆಹಿಡಿದಿದ್ದು ಈ ಗೋವುಗಳನ್ನು ವಿಟ್ಲದಿಂದ ಚಾಮರಾಜನಗರಕ್ಕೆ ಗೋವುಗಳನ್ನು ಲಾರಿಗೆ ತುಂಬಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಎರಡು ಲಾರಿ ಸೇರಿ ಒಟ್ಟು 15ಕ್ಕೂ ಹೆಚ್ಚು ಗೋವುಗಳು ಇದ್ದು ಈ ಗೋವುಗಳನ್ನು ರಾತ್ರಿ 10 ಗಂಟೆಗೆ ಚಾಮರಾಜನಗರಕ್ಕೆ ತಲುಪಿಸುವುದಕ್ಕೆ ಅನುಮತಿ ಪಡೆಯಲಾಗಿದ್ದು ಆದರೆ ಪಡೆದ ಅನುಮತಿಯ ಕಾನೂನು ಮೀರಿ ಲಾರಿ ಚಾಲಕರು ತಡವಾಗಿ ತೆಗೆದುಕೊಂಡು ಹೋಗುತ್ತಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ಇದೀಗ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು ಸದ್ಯ ಪೋಲಿಸರು ಚಾಲಕರನ್ನು ಮತ್ತು ಪರವಾಣಿಗೆಯ ಪ್ರತಿಯನ್ನು ಪರಿಶೀಲನೆ ನಡೆಸಿ ರಾತ್ರಿ ೧೦ಗಂಟೆಗೆ ಚಾಮರಾಜನಗರ ತಲುಪಬೇಕಾಗಿತ್ತು ಆದರೆ ಅಲ್ಲಿಗೆ ತಲುಪುವುದು ಕಷ್ಟ ಸಾಧ್ಯವಾದ ಹಿನ್ನಲೆಯಲ್ಲಿ ಎಲ್ಲಿಂದ ಗೋವುಗಳನ್ನು ತುಂಬಿದ್ದರೋ ಅಲ್ಲಿಗೆ ಮರಳಿ ಕಳುಹಿಸಿದ್ದು ಈ ವಾಹನವನ್ನು ಸುಳ್ಯ ಪೋಲಿಸ್ ಠಾಣಾ ವ್ಯಾಪ್ತಿಯ ತನಕ ನೋಡಿಕೊಳ್ಳುವ ಜವಾಬ್ದಾರಿ ಹೊತ್ತು ಸುಳ್ಯದಿಂದ ಪೋಲಿಸ್ ಮತ್ತು ಲಾರಿಗಳು ಹೊರಟಿರುವುದಾಗಿ ತಿಳಿದುಬಂದಿದೆ.
- Thursday
- November 21st, 2024