ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ಆಶ್ರಯದಲ್ಲಿ ಕೇರ್ಪಳ ಹಿ.ಪ್ರಾ.ಶಾಲೆ, ಕೇರ್ಪಳ- ಕುರುಂಜಿ- ಭಸ್ಮಡ್ಕ ಇದರ ಸಹಯೋಗದೊಂದಿಗೆ ೩೧ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಸೆ.೧೦ರಂದು ನಡೆಯಿತು.ಕಾರ್ಯಕ್ರಮವನ್ನು ಸುಳ್ಯದ ಹಿರಿಯ ಟೈಲರ್ ಮಹಾಬಲ ಯು.ಕೆ. ಉದ್ಘಾಟಿಸಿದರು. ಯು.ಮಂಡಲದ ಗೌರವಾಧ್ಯಕ್ಷ ಲಕ್ಷ್ಮೀಶ್ ದೇವರಕಳಿಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇರ್ಪಳ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಉಷಾ ಚಂದ್ರಶೇಖರ್, ಸುಳ್ಯ ರೋಟರಿ ಸಿಟಿ ಕ್ಲಬ್ ಅಧ್ಯಕ್ಷ ಗಿರೀಶ್ ನಾರ್ಕೋಡು, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸವಿತಾ ನಾರ್ಕೋಡು, ಕೇರ್ಪಳ ಅಂಗನವಾಡಿ ಕಾರ್ಯಕರ್ತೆ ಶೋಭಾವತಿ, ಹಿರಿಯರಾದ ಮೀನಾಕ್ಷಿ ಮಾಲಿಂಗ ನಾಯ್ಕ ಭಸ್ಮಡ್ಕ ಭಾಗವಹಿಸಿದ್ದರು.
ಕೇರ್ಪಳ ಶಾಲೆಯ ಹಿರಿಯ ವಿದ್ಯಾರ್ಥಿ ಗಣೇಶ್ ಇವರು ತಂದೆ – ತಾಯಿಯ ಹೆಸರಿನಲ್ಲಿ ಶಾಲೆಯಲ್ಲಿ ದತ್ತಿನಿಧಿ ಸ್ಥಾಪನೆ ಮಾಡಿದ್ದು ಇದೇ ಸಂದರ್ಭದಲ್ಲಿ ಅದನ್ನು ವಿತರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಹೊನ್ನಮ್ಮ ಕಾರ್ಯಕ್ರಮ ನಡೆಸಿಕೊಟ್ಟರು. ಗಣೇಶರ ಸಹೋದರ ಸತೀಶ್ ದಂಪತಿಗಳು ವಿದ್ಯಾರ್ಥಿಗಳಿಗೆ ದತ್ತಿ ನಿಧಿ ವಿತರಿಸಿದರು.
ಕು.ಸಾಹಿತ್ಯ ಪ್ರಾರ್ಥಿಸಿದರು. ಮನೋಜ್ ಕೇರ್ಪಳ ಸ್ವಾಗತಿಸಿದರು. ಚಂದ್ರಶೇಖರ ಕೇರ್ಪಳ ವಂದಿಸಿದರು. ವಿನ್ಯಾಸ್ ಕುರುಂಜಿ, ವಿನಯ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು. ಆಟೋಟಾ ಸ್ಪರ್ದೆಗಳ ಬಳಿಕ ಸಂಜೆ ಸಮರೋಪ ಸಮಾರಂಭ ಜರುಗಿತು
ಸಮಾರೋಪ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಡಾ| ಗಿರೀಶ್ ಭಾರದ್ವಾಜ್ ಬಹುಮಾನ ವಿತರಿಸಿದರು. ಸುಳ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಸುಳ್ಯ ನಗರ ಪಂಚಾಯತ್ ಸದಸ್ಯರಾದ ಪೂಜಿತಾ ಕೆ.ಯು., ಸುಧಾಕರ ಕುರುಂಜಿಭಾಗ್, ನಿವೃತ್ತ ಸೈನಿಕ ಸತ್ಯನಾರಾಯಣ ಕುದ್ಕುಳಿ, ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ದಯಾನಂದ ಕೇರ್ಪಳ, ಸುಳ್ಯ ಎಸ್.ಬಿ.ಲ್ಯಾಬ್ ಮಾಲಕ ಬಾಲಕೃಷ್ಣ ಎಂ, ಯುವಕ ಮಂಡಲ ಸ್ಥಾಪಕಧ್ಯಕ್ಷ ಶಿವಾನಂದ ಕೆ.ಸಿ. ವೇದಿಕೆಯಲ್ಲಿದ್ದರು.
ವರದಿ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಲಕ್ಕಿಡಿಪ್ ಆಯೋಜಿಸಲಾಗಿದ್ದು ಸಮಾರೋಪ ಸಮಾರಂಭದಲ್ಲಿ ಡ್ರಾ ಮಾಡಲಾಯಿತು. ಪ್ರಥಮ ಬಹುಮಾನ ವಾದ ೫೦ ಕೆಜಿ ಅಕ್ಕಿಯನ್ನು ಆನ್ಯ ಕೇರ್ಪಳ ಪಡೆದುಕೊಂಡರು. ಬಹುಮಾನ ಸ್ವೀಕರಿಸಿದ ಅವರು ಕೇರ್ಪಳ ಶಾಲೆಯ ಅಕ್ಷರದಾಸೋಹಕ್ಕೆ ಕೊಡುಗೆಯಾಗಿ ನೀಡಿದರು.
ಮಕ್ಕಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೇಗಳನ್ನು ನಡೆಸಿ ಬಹುಮಾನ ವಿತರಣೆ ನಡೆಯಿತು. ಗಾಯಕಿ ಆರತಿ ಪುರುಷೋತ್ತಮ್ ಆಶಯ ಗೀತೆ ಹಾಡಿದರು. ಲಕ್ಷ್ಮೀಶ್ ದೇವರಕಳಿಯ ಸ್ವಾಗತಿಸಿದರು. ಚಂದ್ರಶೇಖರ್ ಕೇರ್ಪಳ ವಂದಿಸಿದರು. ವಿನ್ಯಾಸ್ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು.