Ad Widget

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಚಂದನ ಸಾಹಿತ್ಯ ವೇದಿಕೆಯಿಂದ ಚಂದನ ಕವಿಗೋಷ್ಠಿ

. . . . .

ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಚಂದನ ಕವಿಗೋಷ್ಠಿ ಜರುಗಿತು. ನಿವೃತ್ತ ಕೃಷಿ ಅಧಿಕಾರಿ ಮೋಹನ್ ನಂಗಾರು ಅವರು ಶ್ರೀಕೃಷ್ಣ ಪ್ರತಿಮೆಗೆ ಮಂಗಳಾರತಿ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ ಮತ್ತು ಜ್ಯೋತಿಷಿಯಾದ ಎಚ್. ಭೀಮರಾವ್ ವಾಷ್ಟರ್ ರವರು ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ನಿರೂಪಿಸಿದರು. ಖ್ಯಾತ ಹಿರಿಯ ಸಾಹಿತಿಗಳಾದ ಪುತ್ತೂರಿನ ಗೋಪಾಲ ಕೃಷ್ಣ ಭಟ್ ಮನವಳಿಕೆ ಅವರು ಚಂದನ ಕವಿಗೋಷ್ಠಿಯ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ಕವಯಿತ್ರಿ ಚಂದ್ರವತಿ ಬಡ್ಡಡ್ಕ, ನವೀನ್ ಚಾತುಬಾಯಿ, ಮಂಜುನಾಥ್ ಭಾಗವಹಿಸಿದ್ದರು.ಸುಳ್ಯದ ಕವಯತ್ರಿ ವಿಮಲಾರುಣ ಪಡ್ಡಂಬೈಲ್ ಅವರಿಗೆ ಅವರ ಸಾಹಿತ್ಯ ಸಾಧನೆ ಗುರುತಿಸಿ 2023 ನೇ ಸಾಲಿನ ಚಂದನ ಸಾಹಿತ್ಯ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕವಿಗೋಷ್ಠಿ ಅಧ್ಯಕ್ಷರನ್ನು ಮತ್ತು ಉದ್ಘಾಟಕರನ್ನು ಸಮ್ಮಾನಿಸಲಾಯಿತು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕ್ರೀಯಾಶೀಲ ಕಾರ್ಯಕರ್ತರಾದ ಬಿ ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳ ರವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂಣಿ೯ಮಾ ಗಿರೀಶ್ ಗೌಡ ಕುತ್ತಿಮೊಂಡರವರು ಸನ್ಮಾನ ಪತ್ರ ವಾಚಿಸಿದರು. ಲತಾ ಧನು ಆಚಾರ್ಯ ಸೀತಾಂಗೋಳಿ ರವರು ಧನ್ಯವಾದ ಸಲ್ಲಿಸಿದರು. ಚಂದನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕೆ.ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್, ಪೂಣಿ೯ಮಾ ಗಿರೀಶ್ ಗೌಡ ಕುತ್ತಿಮೊಂಡ, ರವಿ ಪಾಂಬಾರ್, ಸಾಯಿ ಪ್ರಶಾಂತ ಕೋಳಿವಾಡ, ರಮ್ಯಾ ಪೆರುವಾಜೆ, ಹರೀಶ್ ಪಂಜಿಕಲ್ಲು, ಹರೀಶ್ ಕಜೆ, ಯಮುನಾ ಹಳೇಗೇಟು ಸುಳ್ಯ, ಕೇಶವ ನೆಲ್ಯಾಡಿ, ಚಂದ್ರಹಾಸ ಕುಂಬಾರ ಬಂದಾರು, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಕಾಸರಗೋಡು, ಅಕ್ಷತಾ ನಾಗನಕಜೆ, ಸುರೇಶ ಕುಮಾರ್ ಚಾರ್ವಾಕ, ಸವಣೂರು ಎಂ ಎ ಮುಸ್ತಾಫಾ ಬೆಳ್ಳಾರೆ, ರಿತಿಕಾ ಸಂಟ್ಯಾರ್, ಶಾರದಾ ಸುಳ್ಯ ಸೌಮ್ಯ ಪಿ. ಎರ್ಮೆಟ್ಟಿ ಸುಳ್ಯ, ಲತಾ ಧನು ಆಚಾರ್ಯ ಸೀತಾಂಗೋಳಿ, ಕಾಸರಗೋಡು, ಚೆನ್ನಕೇಶವ, ಚಂದ್ರಾವತಿ ಬಡ್ಡಡ್ಕ, ವಿಮಲಾರುಣ ಪಡ್ಡಂಬೈಲ್, ಸೈಮನ್ ಮಡಿಕೇರಿ ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರಿಗೂ ಆಕರ್ಷಕ ಪ್ರಶಂಸನಾ ಪತ್ರ, ಕ್ರಿಷ್ಣನ ಮೊಮೆಂಟೊ, ಸಾಹಿತ್ಯ ಕೃತಿಯ ಜೊತೆ ಕೃಷ್ಣನ ಭಾವಚಿತ್ರ ನೀಡಿ ಗೌರವಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!