ಕಾಂತಮಂಗಲ ವೃತ್ತದ ಬಳಿಯಲ್ಲಿ ರಸ್ತೆ ನಿರ್ಮಾಣದ ವೇಳೆ ಸುಸಜ್ಜಿತ ಚರಂಡಿ ವ್ಯವಸ್ಥೆ ಮಾಡಿದ್ದರು. ಇಲ್ಲಿ ಖಾಸಗಿಯವರು ಸಂಪರ್ಕ ರಸ್ತೆ ನಿರ್ಮಾಣದ ವೇಳೆ ಚರಂಡಿ ಮುಚ್ಚಿ ರಸ್ತೆ ನಿರ್ಮಾಣ ಮಾಡಿದ್ದರಿಂದ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಕಾಂತಮಂಗಲದ ನ್ಯಾಯಬೆಲೆ ಅಂಗಡಿ ಬಳಿ ಚರಂಡಿ ಮುಚ್ಚಿ ಅವೈಜ್ಞಾನಿಕವಾಗಿ ರಸ್ತೆ ಮಾಡಿರುವುದರಿಂದ ಸುಳ್ಯ ಅಡೂರು ಅಂತರಾಜ್ಯ ರಸ್ತೆಗೆ ನೀರು ಹರಿದು ಬರುತ್ತಿದ್ದು ಭಾರಿ ಮಳೆಯಿಂದಾಗಿ ಸಮಸ್ಯೆ ಬಹಳಷ್ಟು ಬಿಗುಡಾಯಿಸಿದ್ದು ರಸ್ತೆಯಲ್ಲಿ ನೀರು ನಿಂತು ಹಲವಾರು ದ್ವಿಚಕ್ರ ವಾಹನಗಳು ಕೆಟ್ಟು ನಿಲ್ಲುವ ಸಂದರ್ಭ ಉದ್ಬವಿಸಿದೆ. ಈ ಹಿಂದೆಯೇ ಗ್ರಾಮ ಪಂಚಾಯತ್ ಮೌಖಿಕವಾಗಿ ಚರಂಡಿ ಮಾಡಲು ಹೇಳಿದ್ದರು ಇವರು ಯಾವುದೇ ತರಹದಲ್ಲಿ ಆದೇಶವನ್ನು ಪಾಲಿಸದೇ ಇದ್ದು , ಮನೆಯ ಕೊಳಚೆ ನೀರುಗಳು ಕೂಡ ರಸ್ತೆಗೆ ಬರುವುತ್ತಿರುವುದಾಗಿ ಸ್ಥಳೀಯರು ದೂರಿಕೊಳ್ಳುತ್ತಿದ್ದು ಈ ಪ್ರಕರಣದ ಬಗ್ಗೆ
ಆಡಳಿತವು ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ. ಈ ಹಿಂದೆ ಗ್ರಾಮ ಪಂಚಾಯತ್ ಖಾಸಗಿ ವ್ಯಕ್ತಿಗಳಿಗೆ ನೋಟಿಸ್ ನೀಡಿದ್ದರು ಅದಕ್ಕೆ ಯಾವುದೇ ಕಿಮ್ಮತ್ತು ನೀಡಿಲ್ಲ ಎಂದು ತಿಳಿದುಬಂದಿದೆ. ಇನ್ನಾದರು ಆಡಳಿತವು ಎಚ್ಚೆತ್ತು ಸಾರ್ವಜನಿಕ ರಿಗೆ ಆಗುವ ಸಮಸ್ಯೆಯನ್ನು ಸರಿಪಡಿಸುವುದೇ ಕಾದು ನೋಡಬೇಕಿದೆ.