ಬೆಳಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ಸೆ.9 ರಂದು ಭೇಟಿ ನೀಡಿ ಕಾಲೇಜು ಕೊಠಡಿಗಳನ್ನು ವೀಕ್ಷಣೆ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಂಕರ ಭಟ್ ರವರು ಹಲವು ಬೇಡಿಕೆಗಳನ್ನು ಮುಂದಿಟ್ಟರು.
ಬಳಿಕ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಕಾಲೇಜಿನ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು. ವಿದ್ಯಾರ್ಥಿಗಳಿಗೆ ಶಿಕ್ಷಣದ ಅಗತ್ಯ ಮತ್ತು ಸ್ವಾವಲಂಬಿ ಬದುಕಿನ ಮಹತ್ವದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಬೆಳಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪಾರ್ವತಿ ಮರಕ್ಕಡ, ಬೆಳಂದೂರು ಗ್ರಾ.ಪಂ ಉಪಧ್ಯಾಕ್ಷರಾದ ಜಯಂತ್ ಅಬೀರ ,ಮಾಜಿ ಅಧ್ಯಕ್ಷೆ ಶ್ರೀಮತಿ ಉಮೇಶ್ವರಿ ಅಗಳಿ ,ಮಾಜಿ ಜಿ.ಪಂ ಸದಸ್ಯೆಯಾದ ಶ್ರೀಮತಿ ಪ್ರಮೀಳಾ ಜನಾರ್ಧನ ,ಶ್ರೀಮತಿ ಚಂದ್ರಕಲಾ ಜಯರಾಮ್ ಮತ್ತು ಕಾಲೇಜಿನ ನಿಕಟಪೂರ್ವ ಸಿಡಿಸಿ ಸದಸ್ಯರುಗಳಾದ ಶೀನಪ್ಪಗೌಡ ಬೈತಡ್ಕ, ಸೀತರಾಮ ಗೌಡ ಮುಂಡಾಳ, ಪ್ರವೀಣ್ ಕೆಡಂಜಿ, ಶ್ರೀಮತಿ ಶುಭ ಆರ್ ನೊಂಡಾ ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ವಿಠ್ಠಲ ಗೌಡ ಅಗಳಿ ,ಮಾಜಿ ಅಧ್ಯಕ್ಷರಾದ ಸಂತೋಷ ಮರಕ್ಕಡ ,ದಾನಿಗಳಾದ ರಾಮಚಂದ್ರ ಕಲ್ಲೂರಾಯ ,ಕಾಲೇಜಿನ ಹಿತೈಷಿಗಳಾದ ಶ್ರೀಮತಿ ವಚನ ಜಯರಾಮ್ ಹಾಗೂ ಊರಿನ ಹಿರಿಯರು ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು.