Ad Widget

ಎನ್ ಎಂ ಸಿಯಲ್ಲಿ ಎನ್ ಸಿ ಸಿ ವತಿಯಿಂದ ಶಿಕ್ಷಕರ ದಿನಾಚರಣೆ – ಸಾಧಕರಿಗೆ ಸನ್ಮಾನ.

. . . . . .

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್‌ಸಿಸಿ ವತಿಯಿಂದ ಸಾಧಕ ಶಿಕ್ಷಕರನ್ನು ಗೌರವಿಸುವ ಮೂಲಕ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 5 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಮುಕ್ತ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಡಾ. ಮಮತಾ ಕೆ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಡಾ. ಅನುರಾಧಾ ಕುರುಂಜಿ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಶಿಕ್ಷಕರು ದಿನದಿಂದ ದಿನಕ್ಕೆ ಹೊಸತನಕ್ಕೆ ತೆರೆದುಕೊಳ್ಳಬೇಕು. ಶಿಕ್ಷಕರು ಯಾವತ್ತೂ ವಿದ್ಯಾರ್ಥಿಗಳಿಗೆ ಆದರ್ಶವಾಗಿರುತ್ತಾರೆ. ಅವರ ಹಿತನುಡಿಗಳನ್ನು ಪಾಲಿಸುವ ಮೂಲಕ ಶಿಕ್ಷಕರಿಗೆ ಗೌರವ ಕೊಡಿ ಎನ್ನುತ್ತಾ ಸಾಧಕ ಶಿಕ್ಷಕರನ್ನು ಗೌರವಿಸುವ ಮೂಲಕ ವಿನೂತನವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ ಎನ್‌ಸಿಸಿ ಘಟಕವನ್ನು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿದ ಡಾ. ಮಮತಾ ಕೆ ಮಾತನಾಡಿ,
ಶಿಕ್ಷಕರ ದಿನಾಚರಣೆ ಶಿಕ್ಷಕರ ಆದರ್ಶಗಳನ್ನು ಮೆಲುಕು ಹಾಕುವ ಕ್ಷಣ. ಗುರು ಕೇಂದ್ರಿತ ಶಿಕ್ಷಣ ವ್ಯವಸ್ಥೆಯಿಂದ ಹೊರಬಂದು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿರುವ ಇಂದಿನ ದಿನದಲ್ಲಿ ಶಿಕ್ಷಕರು ಹಾಕಿಕೊಟ್ಟ ಒಳ್ಳೆಯ ಮಾರ್ಗದಲ್ಲಿ ಮುನ್ನಡೆದು ಆದರ್ಶ ವಿದ್ಯಾರ್ಥಿಗಳಾಗಿ ಎಂದು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಇನ್ನೋರ್ವ ಸನ್ಮಾನಿತರಾದ ಡಾ. ಅನುರಾಧಾ ಕುರುಂಜಿ ಮಾತನಾಡಿ, ಕೇವಲ ಅಂಕಗಳಿಗಾಗಿ ಶಿಕ್ಷಣ ಪಡೆಯದೇ ಅಲ್ಲಿ ಸಿಗುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ನೀವು ಎನ್ ಸಿಸಿಯಲ್ಲಿ ದಿನನಿತ್ಯ ಗಳಿಸುವ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಓರ್ವ ಆದರ್ಶ ವ್ಯಕ್ತಿಯಾಗಲು ಸಾಧ್ಯವಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶ ಎಲ್ಲಾ ಶಿಕ್ಷಕರಿಗೂ ದಾರಿ ದೀಪವಾಗಲಿ ಎಂದು ಸನ್ಮಾನ, ಪ್ರಶಸ್ತಿಗಳು ಸಾಧಕನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಒಳ್ಳೆಯ ಕೆಲಸ ಮಾಡುತ್ತಿರಿ ಸಮಾಜ
ಒಂದಲ್ಲ ಒಂದು ದಿನ ಗುರುತಿಸುತ್ತದೆ ಎಂದು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ ಹಾಗೂ ಎನ್ ಸಿಸಿ ಅಧಿಕಾರಿ ಲೆಫ್ಟಿನೆಂಟ್ ಸೀತರಾಮ ಎಂ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.‌

ಎನ್‌ಸಿಸಿ ಕೆಡೆಟ್ ಗಳಾದ ವೈಷ್ಣವಿ ಮತ್ತು ಚಲನಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಪ್ರತೀಕಾ ಕೆ ಸ್ವಾಗತಿಸಿ, ನಿರೂಪಿಸಿದರು. ವೈಷ್ಣವಿ ಜಿ ವಂದಿಸಿ, ಸ್ಪೂರ್ತಿ ಕೆ ಎಸ್ ಹಾಗೂ ಯುಕ್ತಿ ಬಿ ಪಿ ಸನ್ಮಾನಿತರನ್ನು ಪರಿಚಯಿಸಿದರ
ಉಪನ್ಯಾಸಕರಾದ ವಿಷ್ಣು ಪ್ರಶಾಂತ ಹಾಗೂ ಹರಿಪ್ರಸಾದ್ ಕಾರ್ಯಕ್ರಮಸಲ್ಲಿ ಉಪಸ್ಥಿತರಿದ್ದರು . ಎಲ್ಲಾ ಎನ್ ಸಿಸಿ ಕೆಡೆಟ್ ಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!