ಅಜ್ಜಾವರ ಗ್ರಾಮದ ಮೇನಾಲದಲ್ಲಿ ವಿಶ್ವಹಿಂದು ಪರಿಷತ್ ಮತ್ತು ಭಜರಂಗದಳ ಪ್ರಖಂಡ ಹಾಗೂ ಶ್ರೀ ಕೃಷ್ಣ ಭಜಾನ ಮಂದಿರ ಮೇನಾಲ ಇವುಗಳ ಆಶ್ರಯದಲ್ಲಿ ಸೆ-೬ ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ವಿಜೃಂಬಣೆಯಿಂದ ನಡೆಯಿತು. ವಿವಾದಿತ ಸ್ಥಳವಾಗಿರುವುದರಿಂದ ಪೋಲೀಸು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಕೃಷ್ಣ ಜನ್ಮಾಷ್ಟಾಮಿಯ ಪ್ರಯುಕ್ತ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಅಟೋಟ ಸ್ಪರ್ಧೆಗಳು ಜರುಗಿತು. ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ , ಎ.ವಿ ತೀರ್ಥರಾಮ , ಅಶೋಕ್ ಅಡ್ಕಾರ್ , ಭಜರಂಗದಳ ಮುಖಂಡರಾದ ನವೀನ್ ಎಲಿಮಲೆ , ವರ್ಷಿತ್ ಚೊಕ್ಕಾಡಿ ,ಸುಭೋದ್ ಶೆಟ್ಟಿ ಮೇನಾಲ , ಶೀನಪ್ಪ ಬಯಂಬು , ಪ್ರಬೋದ್ ಶೆಟ್ಟಿ ಮೇನಾಲ , ಸುನಿಲ್ ರೈ ಮೇನಾಲ , ಸತ್ಯವತಿ ಬಸವನಪಾದೆ , ಅಕ್ಷಯ್ ಮೇನಾಲ , ಕಮಲಾಕ್ಷ ರೈ ಬಾಡೇಲು , ಚನಿಯ ಕಲ್ತಡ್ಕ , ಬಾಲಕೃಷ್ಣ ಮೇನಾಲ , ಮಹೇಶ್ ರೈ ಮೇನಾಲ ಸೇರಿದಂತೆ ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೋಲಿಸ್ ಅಧಿಕಾರಿಗಳ ಮೊಕ್ಕಾಂ
ಸ್ಥಳಕ್ಕೆ ಮಂಗಳೂರು ಅಡಿಷನಲ್ ಎಸ್ ಪಿ ಧರ್ಮಪ್ಪ ಎಂ.ಎನ್ , ಡಿ ವೈ ಎಸ್ ಪಿ ಗಾನ , ಸರ್ಕಲ್ ಇನ್ಪೆಕ್ಟರ್ ನವೀನ್ ಚಂದ್ರ ಜೋಗಿ , ಸಬ್ ಇನ್ಪೆಕ್ಟರ್ ಈರಯ್ಯ ಸೇರಿದಂತೆ ಪೋಲಿಸ್ ಇಲಾಖೆಯ ಸುಮಾರು ೬೦ಕ್ಕು ಹೆಚ್ಚು ಸಿಬ್ಬಂದಿಗಳು ಕಾಂತಮಂಗಲದಿಂದಲೇ ಕಾವಲು ಏರ್ಪಡಿಸಿದ್ದರು. ಆಟೋಟಾ ಸ್ಪರ್ಧೆಗಳು ಮುಕ್ತಾಯವಾಗಿದ್ದು ಮೈದಾನವನ್ನು ಪೋಲೀಸ್ ಅಧಿಕಾರಿಗಳ ಸಮ್ಮುಖ ಸ್ವಚ್ಚಗೊಳಿಸಿ ಕೇಸರಿ ಧ್ವಜ, ಬಂಟಿಂಗ್ಸ್ ಬ್ಯಾನರ್ ಗಳನ್ನು ತೆರವು ಗೊಳಿಸಿ ಯಥಾಸ್ಥಿತಿಗೆ ತರಲಾಗಿದೆ. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳಾದ ಅಜಿತ್ , ಶಿವಣ್ಣ ಉಪಸ್ಥಿತರಿದ್ದರು.