Ad Widget

ಪೆರಾಜೆ : ಪತಿಯ ಸಾವಿನ ನೋವಿನಲ್ಲಿ ಆತ್ಮಹತ್ಯೆಗೆ ಶರಣಾದ ಪತ್ನಿ – 2 ವರ್ಷದ ಹಿಂದಷ್ಟೇ ಮದುವೆಯಾಗಿದ್ದ ದಂಪತಿ – ಪತಿ ನಿಧನರಾಗಿ ತಿಂಗಳು ಕಳೆಯುವ ಮುನ್ನವೇ ಪತ್ನಿ ಆತ್ಮಹತ್ಯೆ

ಪತಿ ಮೃತಪಟ್ಟ 28 ದಿನದಲ್ಲಿ ಪತ್ನಿ ಆತ್ಮಹತ್ಯೆ ಶರಣಾದ ಘಟನೆ ಪೆರಾಜೆ ಗ್ರಾಮದ ಹೊದ್ದೆಟ್ಟಿಯಲ್ಲಿ ಸೆ.4ರಂದು ನಡೆದಿದೆ.
ರೂಪ (29)ಮೃತಪಟ್ಟ ದುರ್ದೈವಿ. ಇವರು ಪೆರಾಜೆಯವರಾಗಿದ್ದು 8 ವರ್ಷಗಳಿಂದ ಪುತ್ತೂರಿನ ಚೇತನಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರನ್ನು ಸವಣೂರಿನ ಪೆರಿಯಡ್ಕ ದಿನೇಶ ಎಂಬರಿಗೆ ಮದುವೆ ಮಾಡಿಕೊಡಲಾಗಿತ್ತು. ಕೆಲ ದಿನಗಳ ಹಿಂದೆ ಪತಿ ಹೃದಯಾಘಾತದಿಂದ ನಿಧನರಾಗಿದ್ದರು. ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಇದೀಗ ಈಕೆ ಪತಿಯ ಸಾವಿನ ನೋವಿನಲ್ಲಿ ಮನನೊಂದು ಸ್ನಾನದ ಕೊಠಡಿಯಲ್ಲಿ ಚೂಡಿದಾರ ಶಾಲು ಬಳಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ನಾನಕ್ಕೆ ಹೋದವಳು ಬಾರದ ಹಿನ್ನೆಲೆಯಲ್ಲಿ ಅನುಮಾನ ಬಂದು ತಂದೆ ತಾಯಿ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಸೆ.5 ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದೆ. ಮೃತರು ತಂದೆ ದಾಮೋದರ (ಅಂಗಾರ) ತಾಯಿ ಲೀಲಾವತಿ, ಅಣ್ಣ ಚೇತನ್ ರನ್ನು ಅಗಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading