Ad Widget

ನಾಲ್ಕೂರು : ದಲಿತರ ಮನೆಗೆ ತೆರಳುವ ರಸ್ತೆಗೆ ತಡೆ ಆರೋಪ – ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ತಾಲೂಕು ಕಚೇರಿ ಎದುರು ಧರಣಿ

ನಾಲ್ಕೂರು : ದಲಿತರ ಮನೆಗೆ ತೆರಳುವ ರಸ್ತೆಗೆ ತಡೆ ಆರೋಪ – ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ತಾಲೂಕು ಕಚೇರಿ ಎದರು ಧರಣಿ

. . . . . . .

ನಾಲ್ಕೂರು ಗ್ರಾಮದ ದಲಿತ ನಿವಾಸಿಗಳು ವಾಸಿಸುತ್ತಿದ್ದ ಮನೆಗಳನ್ನು ಸಂಪರ್ಕಿಸುವ ರಸ್ತೆಯನ್ನು ಸ್ಥಳೀಯರೋರ್ವರು ಕಣಿ ನಿರ್ಮಿಸಿ ತಡೆ ಮಾಡಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ಮತ್ತು ವಿವಿಧ ದಲಿತ ಸಂಘಟನೆಯ ಮುಖಂಡರು ಇಂದು ಸುಳ್ಯ ತಾಲೂಕು ಕಚೇರಿ ಎದರು ಧರಣಿ ನಡೆಸಿದರು.

ಪ್ರತಿಭಟನೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಮುಖಂಡರು, ವಿವಿಧ ದಲಿತ ಸಂಘಟನೆಗಳ ಮುಖಂಡರು, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಮಾತನಾಡಿ ನಾಲ್ಕುೂರು ಗ್ರಾಮದ ಸರ್ವೇ ನಂಬರ್ 254/5ಎ1 ರಲ್ಲಿ 1.45 ಎಕರೆ ಸರಕಾರಿ ಜಾಗವಿದ್ದು ಇಲ್ಲಿ ಸುಮಾರು 40 ವರ್ಷಗಳಿಂದ ಸ್ಥಳೀಯ 4 ದಲಿತ ಕುಟುಂಬಗಳು ಈ ಭಾಗದ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇದೀಗ ಸ್ಥಳೀಯ ನಿವಾಸಿ ಡಿ. ಜೆ. ಜನಾರ್ದನ್ ಎಂಬುವರು ರಸ್ತೆಯಲ್ಲಿ ಬೃಹತ್ ಕಣಿ ನಿರ್ಮಿಸಿದ್ದಾರೆ.

ಈ ವಿಷಯದ ಕುರಿತು ಕಳೆದ 15 ದಿನಗಳ ಹಿಂದೆ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಯರಿಗೆ ಮತ್ತು ಸುಳ್ಯ ತಹಶೀಲ್ದಾರರಿಗೂ ಮನವಿಯನ್ನು ನೀಡಿರುತ್ತಾರೆ.
ಬಳಿಕ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಸ್ಥಳೀಯ ದಲಿತ ನಿವಾಸಿಗಳಿಗೆ ನೀಡಿದ್ದರು.

ಆದರೆ ಈ ವಿಷಯ ಕಳೆದು ಹದಿನೈದು ದಿನ ಕಳೆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಸಾಂಕೇತಿಕವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದನೆ ನೀಡದಿದ್ದಲ್ಲಿ ನಾವೇ ಮುಂದಾಗಿ ಜನಾರ್ಧನ್ ರವರು ಮಾಡಿರುವ ಕಣಿಯನ್ನು ಮುಚ್ಚುವ ಕೆಲಸವನ್ನು ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಮತ್ತು ದಲಿತ ಸಮುದಾಯದ ಹೆಚ್ಚಿನ ಬಾಂಧವರನ್ನು ಸೇರಿಸಿ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ್ ಚಂದ್ರಕಾಂತ್ ಸಂಘಟನೆಯ ಮುಖಂಡರಿಂದ ಮನವಿಯನ್ನು ಸ್ವೀಕರಿಸಿ ತಾವು ನೀಡಿದ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ನೀಡುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಪರಮೇಶ್ವರ ಕೆಮ್ಮಿಂಜೆ, ತಾಲೂಕು ಸಮಿತಿ ಅಧ್ಯಕ್ಷ ರಮೇಶ್ ಕೊಡಂಕಿರಿ, ದಲಿತ ಸಂಘಟನೆಯ ಜಿಲ್ಲಾ ಮುಖಂಡರಾದ ವಿಶ್ವನಾಥ ಅಲೆಕ್ಕಾಡಿ, ಅಚ್ಚುತ ಮಲ್ಕಜೆ, ಸೀನ ಬಾಳಿಲ, ಸ್ಥಳೀಯ ಛತ್ರಪ್ಪಾಡಿ ದಲಿತ ನಿವಾಸಿಗಳಾದ ಕುಂಞಪ್ಪ,ಚನ್ನು,ಸುಂದರಿ, ನೇತ್ರಾವತಿ,ಅರುಣ,ವಸಂತ, ರಾಮಚಂದ್ರ,ತೀರ್ಥರಾಮ ಮೊದಲಾದವರು ಪಾಲ್ಗೊಂಡಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!