Ad Widget

ನನಗೆ ಅಧಿಕಾರದಲ್ಲಿ ಕೂರಲು ಗೊತ್ತಿದೆ ಪಕ್ಷಕ್ಕಾಗಿ ಸಾಮಾನ್ಯ ಕಾರ್ಯಕರ್ತನಾಗಲು ಗೊತ್ತಿದೆ : ರಮಾನಾಥ ರೈ – ಕಾಂಗ್ರೆಸ್ ನಲ್ಲಿರುವ ಗೊಂದಲ ಪರಿಹಾರಕ್ಕೆ ಬ್ಲಾಕ್ ಸಮಿತಿ ಬದಲಾಯಿಸಲು ಕಾರ್ಯಕರ್ತರ ಒತ್ತಡ

. . . . . . . . .

ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ನನಗೆ ನಾಯಕನಾಗಿಯು ಗೊತ್ತಿದೆ ಸಾಮಾನ್ಯ ಕಾರ್ಯಕರ್ತನಾಗಿಯು ಇರಲು ಗೊತ್ತಿದೆ, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದು ಸುಳ್ಯದ ನಾಯಕರನ್ನು ಉದ್ದೇಶಿಸಿ ಮಾಜಿ ಸಚಿವರಾದ ಬಿ.ರಮನಾಥ ರೈ ಹೇಳಿದ್ದಾರೆಂದು ಕೇಳಿಬಂದಿದೆ. ಸೆ.3 ರಂದು ಸುಳ್ಯದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ರಮಾನಾಥ ರೈ ಅವರನ್ನು ಸುಳ್ಯದ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು. ಈ ವೇಳೆ ಕೆಲವರನ್ನು ಉದ್ದೇಶಿಸಿ ಸುಳ್ಯದ ಕಾಂಗ್ರೆಸ್ ಬೆಳವಣಿಗೆಗಳ ಬಗ್ಗೆ ಬೇಸರಗೊಂಡು ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ‌.

. . . . . . .

ಬ್ಲಾಕ್ ಅಧ್ಯಕ್ಷರ ಬದಲಾವಣೆ ಕೆಲ ಕಾರ್ಯಕರ್ತರ ಒತ್ತಡ :

ಕಾಂಗ್ರೆಸ್ ನಲ್ಲಿ ಹಲವಾರು ಗೊಂದಲಮಯ ಪ್ರಸಂಗಗಳು ನಡೆದಿದ್ದು ಇದನ್ನೆಲ್ಲಾ ಸರಿಪಡಿಸಲು ಬ್ಲಾಕ್ ಅಧ್ಯಕ್ಷರ ಬದಲಾವಣೆ ಮಾಡಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆನ್ನಲಾಗಿದೆ. ಈ ಪೈಕಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕರಿಕ್ಕಳ , ಮಿತ್ರದೇವ ಮಡಪ್ಪಾಡಿ , ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ಜಯಪ್ರಕಾಶ್ ರೈ , ಎಂ.ವೆಂಕಪ್ಪ ಗೌಡ ಇವರಲ್ಲಿ ಯಾರನ್ನಾದರೂ ಅಧ್ಯಕ್ಷ ಮಾಡಬೇಕೆಂದು ಕಾರ್ಯಕರ್ತರು ರಮಾನಾಥ ರೈ ಗಳಿಗೆ ಸೂಚಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಮೇಜರ್ ಸರ್ಜರಿ ಮಾಡುತ್ತದಾ ಎಂದು ಕಾದು ನೋಡಬೇಕಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading