Ad Widget

ಕೇರಳದಲ್ಲಿ ಚಿನ್ನ ಕಳ್ಳತನ ಮಾಡಿ ಸುಳ್ಯದಲ್ಲಿ ಮಾರಾಟ – ಕಳ್ಳರನ್ನು ಸುಳ್ಯಕ್ಕೆ ಕರೆತಂದು ಮಹಜರು

. . . . . . . . .

ಕೇರಳದಲ್ಲಿ ಸರ ಕಳವುಗೈದು ಸುಳ್ಯದಲ್ಲಿ ಮಾರಾಟ ಮಾಡಿ ಇದೀಗ ಕೇರಳ ಪೋಲಿಸರ ಕೈಗೆ ಸಿಕ್ಕಿಬಿದ್ದು ಸುಳ್ಯಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದ ಬಗ್ಗೆ ವರದಿಯಾಗಿದೆ.

. . . . . . .

ಘಟನೆಯ ವಿವರ :
ಕೇರಳದಲ್ಲಿ ಚಿನ್ನದ ಸರವನ್ನು ಕಳವುಗೈದ ಕಳ್ಳರು ಸುಳ್ಯದ ಚಿನ್ನದ ಅಂಗಡಿಯೋಂದಕ್ಕೆ ಆಗಮಿಸಿ ನಾವು
ಸುಳ್ಯದ ಕಾಲೇಜೊಂದರಲ್ಲಿ ಓದುತ್ತಿದ್ದೇವೆ. ನಮ್ಮ ಬಳಿ ಫೀಸ್ ಕಟ್ಟುವುದಕ್ಕೂ ಹಣವಿಲ್ಲ. ದಯಮಾಡಿ ಸಹಾಯ ಮಾಡಿ ನಮ್ಮ ಬಳಿ ಇರುವ 3 ಪವನ್ ಚಿನ್ನದ ಸರವನ್ನು ತೆಗೆದುಕೊಳ್ಳಿ ಎಂದು ನಾಟಕವಾಡಿದ್ದ ಗಂಡ-ಹೆಂಡತಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಳೆದ ೨೨ ದಿನಗಳ ಹಿಂದೆ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೇರಳ ಪೊಲೀಸರು ಸರ್ಜಾನ್ ಎಂಬ ವ್ಯಕ್ತಿಯನ್ನು ಕಾಸರಗೋಡಿನಲ್ಲಿ ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಪ್ಟೆಂಬರ್ ೨ರಂದು ಶನಿವಾರದಂದು ಮಧ್ಯಾಹ್ನ 3.30ಕ್ಕೆ ಸುಳ್ಯದ ಖಾಸಗಿ ಬಸ್ ಸ್ಟ್ಯಾಂಡ್ ನಲ್ಲಿರುವ ಚಿನ್ನದಂಗಡಿಗೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿರುವುದಾಗಿ ತಿಳಿದು ಬಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading