ಎಲ್ಲಿ ಅಗತ್ಯತೆ ಇದೆಯೋ ಅಲ್ಲಿ ನಾವಿರಬೇಕು. ಸೇವೆ ಮಾಡುವುದರಿಂದ ನಮಗೆ ತೃಪ್ತಿ ದೊರೆಯುತ್ತದೆ. ಮಂದಹಾಸ ನಗು ತರುವುದರೊಂದಿಗೆ ಬಡವರ ಸೇವೆ ಮಾಡುವುದೇ ಲಯನ್ಸ್ ಕ್ಲಬ್ ನ ಉದ್ದೇಶವಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ಪ್ರೊ .ರಂಗಯ್ಯ ಶೆಟ್ಟಿಗಾರ್ ಹೇಳಿದರು. ಅವರು ಆ.30ರಂದು ಮರ್ದಾಳ ಬೆಥನಿ ವಿಶೇಷ ಮಕ್ಕಳ ಶಾಲೆಗೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳ ಮಧ್ಯಾಹ್ನದ ಅನ್ನದಾನಕ್ಕೆ ಒಂದು ವರ್ಷಕ್ಕೆ ಬೇಕಾಗುವ ಖರ್ಚಿನ ಬಗ್ಗೆ ಈ ತಿಂಗಳ ಮೊತ್ತವನ್ನು ಹಸ್ತಾಂತರಿಸಿ ಮಾತನಾಡಿದರು. ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಪ್ರತಿ ತಿಂಗಳು ರೂ 10, 11 ತಿಂಗಳಿಗೆ ಬೇಕಾಗುವ ಮಧ್ಯಾಹ್ನದ ಅನ್ನದಾನಕ್ಕೆ ಒಂದು ಲಕ್ಷದ 10,000 ಮೊತ್ತವನ್ನು ನೀಡುತ್ತಾ ಬರಲಿರುವರು.ಅನ್ನದಾನದ ದೇಣಿಗೆಯ ಪ್ರಾಯೋಜಕರಾಗಿ ದೀಪಕ್ .ಎಚ್ .ಬಿ ಮನೆಯವರು, ದಿನೇಶ್ ಮೊಗ್ರ ಮನೆಯವರು, ರಾಮಚಂದ್ರ ಪಳಂಗಾಯ ಮನೆಯವರು, ಹಾಗೂ ರಂಗಯ್ಯ ಶೆಟ್ಟಿಗಾರ್ ಮನೆಯವರು ನೀಡುತ್ತಿದ್ದಾರೆ. ಮುಖ್ಯ ಅತಿಥಿಯಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಮಾತನಾಡಿ ಇಡೀ ವಿಶ್ವವೇ ನನ್ನ ಕುಟುಂಬ, ಎಲ್ಲರ ಏಳಿಗೆಯೇ ನನ್ನ ಶ್ರೇಯಸ್, ಎಂದು ಪಾರದರ್ಶಕವಾಗಿ ಸಾಮಾಜಿಕ ಕಳಕಳಿ ಹೊಂದಿರುವ ಲಯನ್ಸ್ ಕ್ಲಬ್ ಇಂದು ವಿಶ್ವದಾದ್ಯಂತ ಜನರ ಮೆಚ್ಚುಗೆಯೊಂದಿಗೆ ಅಂತರಾಷ್ಟ್ರೀಯ ಖ್ಯಾತಿ ಪಡೆದುಕೊಂಡಿದೆ ಎಂದರು . ವೇದಿಕೆಯಲ್ಲಿ ಬೆಥನಿ ವಿಶೇಷ ಮಕ್ಕಳ ಶಾಲೆಯ ಸಂಚಾಲಕ ವಿ ಜೋಯ್, ಮುಖ್ಯ ಶಿಕ್ಷಕಿ ಶೈಲಾ ಪಿ. ಜೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಯ ವಿಶೇಷ ಮಕ್ಕಳು, ಲಯನ್ಸ್ ಕ್ಲಬ್ ನ ಸದಸ್ಯರು, ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು. ಬೆಥನಿ ವಿಶೇಷ ಶಾಲೆಯ ಮಕ್ಕಳು ಪ್ರಾರ್ಥನೆ ನಡೆಸಿಕೊಟ್ಟರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಸತೀಶ ಕೂಜುಗೋಡು ಸ್ವಾಗತಿಸಿ, ಖಜಾಂಜಿ ಚಂದ್ರಶೇಖರ ಪಾನತ್ತಿಲ ವಂದಿಸಿದರು. ವಿಮಲಾ ರಂಗಯ್ಯ ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024