ತೊಡಿಕಾನದ ಅಡ್ಯಡ್ಕ ಎಂಬಲ್ಲಿ ಅನ್ಯ ಕೋಮಿನ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿರುವ ಆರೋಪದಡಿಯಲ್ಲಿ ೧೮ ದಿನಗಳ ಹಿಂದೆ ಕೇಸು ದಾಖಲಾಗಿದ್ದ ಬಜರಂಗದಳ ಮುಖಂಡರಿಗೆ ನಿರೀಕ್ಷಣಾ ಜಾಮೀನು ಮಂಜೂರು ಗೊಂಡಿರುವುದಾಗಿ ತಿಳಿದು ಬಂದಿದೆ.
ಹಲ್ಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿ ಲತೀಶ್ ಗುಂಡ್ಯ ಮತ್ತು ವರ್ಷಿತ್ ಚೊಕ್ಕಾಡಿ ಎಂಬವರ ಮೇಲೆ ಪ್ರಕರಣ ದಾಖಲಾಗಿತ್ತು. ಹಲ್ಲೆ ಪ್ರಕರಣದ ಇಬ್ಬರು ಆರೋಪಿಗಳು ಪುತ್ತೂರಿನ ನ್ಯಾಯಾಲಯದಲ್ಲಿ ಹಾಜರಾಗಿದ್ದು ನ್ಯಾಯಾಲಯವು ಅ.೩೦ ರಂದು ೫0 ಸಾವಿರ ಬಾಂಡ್ ನೊಂದಿಗೆ ಜಾಮೀನು ಮಂಜೂರುಗೊಳಿಸಿ ಆದೇಶಿಸಿದೆ. ಜಾಮೀನು ದೊರೆತ ಕೂಡಲೇ ಆರೋಪಿತರು ಸುಳ್ಯ ಠಾಣೆಗೆ ಹಾಜರಾಗಿದ್ದರೆ ಎಂದು ತಿಳಿದು ಬಂದಿದೆ.ಆರೋಪಿಗಳ ಪರವಾಗಿ ಪುತ್ತೂರಿನ ನ್ಯಾಯವಾದಿ ಮಾಧವ ಪೂಜಾರಿ ಯವರು ವಾದಿಸಿದ್ದರು.