ಬೆಳ್ಳಾರೆ ಗ್ರಾಮ ಪಂಚಾಯತ್ ಗೆ ಮೀಸಲಾದ 97 ಸೇಂಟ್ಸು ಸ್ಥಳದಲ್ಲಿ ಹಳೆ ಸರಕಾರಿ ಆಸ್ಪತ್ರೆಯ ಕಟ್ಟಡ ಇದ್ದು ಇದು ಪಂಚಾಯತ್ ಜಾಗ ಇದನ್ನು ಇತರ ಉದ್ದೇಶಕ್ಕೆ ಪಂಚಾಯತ್ ಅನುಮತಿ ಇಲ್ಲದೇ ಬಳಸಬಾರದೆಂದೂ ಹಾಗೂ ಈ ಬಗ್ಗೆ ಇದರ ಜಂಟಿ ಸರ್ವೆ ನಡೆಸುವಂತೆ ಪುತ್ತೂರು ಸಹಾಯಕ ಆಯುಕ್ತರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಳಾ ನಾಗರಾಜ್ ಮನವಿ ಮಾಡಿದ್ದರು.
ಈ ಮೇರೆಗೆ ಇಂದು ಜಂಟಿ ಸರ್ವೆ ನಡೆದಾಗ ಹಳೆ ಆಸ್ಪತ್ರೆ ಕಟ್ಟಡ ಗ್ರಾಮ ಪಂಚಾಯತ್ ಗೆ ಒಳಪಟ್ಟ ಸ್ಥಳದಲ್ಲಿ ಇರುವುದು ಕಂಡು ಬಂದಿದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಅನುಮತಿ ಪಡೆಯದೇ ಯಾವುದೇ ಕಾರ್ಯ ನಡೆಸಲು ಅಸಾಧ್ಯ ವೆಂದು ಬೆಳ್ಳಾರೆ ಅಭಿವೃದ್ಧಿ ಸಮಿತಿ ಸಂಚಾಲಕ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ. ಪಂಚಾಯತ್ ಜಾಗವನ್ನು ಯಾರು ಒತ್ತುವರಿ ಮಾಡದಂತೆ ಕ್ರಮ ಕೈಗೊಳ್ಳಲು ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದೆ ಎಂದಿದ್ದಾರೆ.
ಇನ್ನೂ ಬೆಳ್ಳಾರೆಗೆ ಮಂಜೂರಾಗಿರುವ ಎಂಡೋ ಕೇರ್ ಸೆಂಟರ್ ಕಥೆ ಏನು ನೋಡಬೇಕಾಗಿದೆ. ಹಳೆ ಆಸ್ಪತ್ರೆ ಕಟ್ಟಡವನ್ನು ದುರಸ್ತಿ ಪಡಿಸಿ ಎಂಡೋ ಪಾಲನಾ ಕೇಂದ್ರ ತೆರೆಯುವುದೆಂದು ಅಧಿಕಾರಿಗಳು ತಿಳಿಸಿದ್ದರು. ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಬೇಕಿತ್ತು. ಇದೀಗ ಜಾಗದ ವಿವಾದ ಉಂಟಾಗಿ ,ಜಂಟಿ ಸರ್ವೆಯಲ್ಲಿ ಪಂಚಾಯತ್ ಪಾಲಾಗಿರುವುದರಿಂದ ಬೇರೆ ಜಾಗ ಹುಡುಕಬೇಕಾಗಿದೆ.
ಗ್ರಾ.ಪಂ. ಅಧ್ಯಕ್ಷೆ ಶಕುಂತಳಾ ನಾಗರಾಜ್ ರನ್ನು ವಿಚಾರಿಸಿದಾಗ ” ಪಂಚಾಯತ್ ಗೆ ಬೇರೆ ಜಾಗ ಇಲ್ಲದಿರುವುದರಿಂದ ಇದನ್ನು ಮುಂದಿನ ದಿನಗಳಲ್ಲಿ ಪಂಚಾಯತ್ ಉಪಯೋಗಕ್ಕೆ ಬಳಸಿಕೊಳ್ಳಬಹುದು ಎಂದು ಈ ಹಿಂದೆ ನಿರ್ಧರಿಸಿದೆ ಎಂದರು.