ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುಳ್ಯ ನಾವೂರು ಕಟ್ಟೆ ಕಾರ್ ಕುಟುಂಬದ ಸದಸ್ಯರೋರ್ವರಾದ ಹಾಜಿ ಅಬ್ದುಲ್ಲಾ ಕಟ್ಟಿಕಾರ್ ರವರ ನಿವಾಸಕ್ಕೆ ಬೆಂಗಳೂರು ಮೂಲದ ಆಸಿಯಾ ಎಂಬ ಮಹಿಳೆ ಅಬ್ದುಲ್ಲಾರ ವರ ಪುತ್ರ ಇಬ್ರಾಹಿಂ ಖಲೀಲ್ ರವರು ನನ್ನನ್ನು ಮತಾಂತರಗೊಳಿಸಿ ವಿವಾಹವಾಗಿರುವುದಾಗಿ ಇದೀಗ ನನ್ನನ್ನು ದೂರ ಸರಿದಿರುವುದಾಗಿ ಹೇಳಿಕೊಂಡು ಬಂದು ಮನೆಯಲ್ಲಿ ಧರಣಿ ಕುಳಿತ ಘಟನೆ ಸುಳ್ಯದಲ್ಲಿ ಸಂಚಲನವನ್ನೇ ಮೂಡಿಸಿತ್ತು.
ಈ ಘಟನೆಯ ಹಿನ್ನೆಲೆಯಲ್ಲಿ ಜೂನ್ 28ರಂದು ಮಂಗಳೂರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥೆ ಎನ್ ಜಿ ಒ ವಿದ್ಯಾದಿನಕರ್ , ದ.ಕ. ಜಿಲ್ಲಾ ಜಮಾಯತ್ ಇಸ್ಲಾಂ ಜಿಲ್ಲಾ ಸಂಚಾಲಕ ಕೌಟಂಬಿಕ ಸಲಹೆಗಾರ ಶಹೀದ್ ಇಸ್ಮಾಯಿಲ್ ಹಾಗೂ ಸುಳ್ಯದ ಸಾಮಾಜಿಕ ಹೋರಾಟಗಾರ ಎಂಬಿ ಸದಾಶಿವ ನೇತೃತ್ವದಲ್ಲಿ ಎರಡು ಕಡೆಯವರನ್ನು ಕರೆಸಿ ನಡೆದ ಘಟನೆಯ ಸತ್ಯಾಸತ್ಯತೆ ಬಗ್ಗೆ ವಿವರವನ್ನು ಸಂಗ್ರಹಿಸುವ, ಪರಿಹಾರವನ್ನು ಕಂಡುಕೊಳ್ಳುವ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವ ಬಗ್ಗೆ ಮಂಗಳೂರು ಜಮಾತ್ ಇಸ್ಲಾಂ ಕಚೇರಿಯಲ್ಲಿ ಮಾತುಕತೆ ನಡೆಯಿತು ಎಂದು ತಿಳಿದುಬಂದಿದೆ.
ಸುಮಾರು ಮೂರು ಗಂಟೆಗಳ ಕಾಲ ಪರ-ವಿರೋಧ ಚರ್ಚೆ ನಡೆದು ಈ ಸಭೆಯಲ್ಲಿ ಮಹಿಳೆ ತಾನು 2014ರಿಂದ 2020 ರ ವರೆಗಿನ ಬಗ್ಗೆ ಇಬ್ರಾಹಿಂ ಇವರೊಂದಿಗೆ ಫೇಸ್ಬುಕ್ನಲ್ಲಿ ಪರಿಚಯದ ಬಗ್ಗೆ, ಸ್ನೇಹಕ್ಕೆ ತಿರುಗಿದರ ಬಗ್ಗೆ ವಿವರ ನೀಡಿದರು. ಖಲೀಲ್ ನೊಂದಿಗೆ ಕಳೆದ ಎಲ್ಲಾ ವಿಷಯಗಳ ಮತ್ತು ದಿನಗಳ ಬಗ್ಗೆ ಸುಮಾರು ಒಂದೂವರೆ ಗಂಟೆಗಳ ಕಾಲ ವಿಷಯ ಮುಂದಿಟ್ಟರು. ಆದರೇ ಮಹಿಳೆ ಬಳಿ ಯಾವುದೇ ಲಿಖಿತ ದಾಖಲೆಗಳು ಇರಲಿಲ್ಲವೆನ್ನಲಾಗಿದೆ.
ಈ ಬಗ್ಗೆ ಖಲೀಲ್ ಮಾತನಾಡಿ ಇವರ ವಿಷಯಗಳನ್ನು ತಳ್ಳಿಹಾಕಿ ಇವರೊಂದಿಗೆ ಫೇಸ್ಬುಕ್ ಗೆಳೆತನ ಮಾತ್ರ ಹೊಂದಿದೆ. ವ್ಯಾಪಾರ ಸಂದರ್ಭದಲ್ಲಿ ಬೆಂಗಳೂರಿಗೆ ಹೋದಾಗ ಇವರನ್ನು ಭೇಟಿಯಾಗಿದ್ದೆ, ಹೊರತು ಇವರನ್ನು ಮತಾಂತರಿಸಿ ನಾನು ಮದುವೆಯಾಗಿಲ್ಲ ಎಂದು ಹೇಳಿದರು.
ಸಭೆಯ ತೀರ್ಮಾನದಂತೆ ಒಂದು ವಾರದಲ್ಲಿ ನಿಖಾಃ ಆಗಿರುವ ದಾಖಲೆಗಳನ್ನು , ಮದುವೆ ಮಾಡಿಸಿದವರ ಹೇಳಿಕೆಯನ್ನು 7 ದಿನದೊಳಗೆ ಸಾಕ್ಷಿ ಸಮೇತ ತರುವಂತೆ ಹಾಗೂ ಈ ಕೆಲಸವನ್ನು ಸಂಧಾನಕಾರರಿಗೆ ಒಪ್ಪಿಸುವುದೆಂದೂ ತೀರ್ಮಾನಿಸಲಾಯಿತು. ಈ ಬಗ್ಗೆ ಮದುವೆ ಆಗಿದ್ದು ರುಜುವಾತು ಆದರೆ ಇವರನ್ನು ಕಲೀಲ್ ನೊಂದಿಗೆ ಕಳಿಸಬೇಕೆಂದು ಸಭೆಯಲ್ಲಿ ತೀರ್ಮಾನವಾಯಿತೆಂದೂ ತಿಳಿದುಬಂದಿದೆ. ಅಲ್ಲಿಯವರೆಗೆ ಅವರ ಮನೆಗೆ ಹೋಗಿ ಯಾವುದೇ ರೀತಿಯ ತೊಂದರೆ ಕೊಡಬಾರದು ಎಂದು ತೀರ್ಮಾನ ಕೈಗೊಳ್ಳಲಾಯಿತು ಇದಕ್ಕೆ ಒಪ್ಪಿದ ಆಸಿಯಾ ಸುಳ್ಯಕ್ಕೆ ಬಂದು ಸ್ಥಳದಲ್ಲಿದ್ದ ಕಟ್ಟೆಕಾರ್ ಮನೆಯ ಸಿಟೌಟ್ ನಲ್ಲಿಟ್ಟಿದ್ದ ಬ್ಯಾಗನ್ನು ಸಂಧಾನಕಾರರ ಮುಖಾಂತರ ತರಿಸಿಕೊಂಡಿದ್ದರು ಎನ್ನಲಾಗಿದೆ.
ಆದರೇ ಸೋಮವಾರ ಸೈಲಂಟಾಗಿ ರೂಂ ನಲ್ಲಿದ್ದ ಮಹಿಳೆ ಮಂಗಳವಾರ ಬೆಳಿಗ್ಗೆ ಮತ್ತೊಮ್ಮೆ ಮನೆಯ ಗೇಟಿನ ಮುಂಭಾಗದಲ್ಲಿ ಹೋಗಿ ಚಯರ್ ಹಾಕಿ ಕುಳಿತಿದ್ದಾರೆ.
ಇದರಿಂದ ಖಲೀಲ್ ಮನೆಯವರು ಆಕ್ರೋಶಗೊಂಡಿದ್ದು ಸಭೆಯ ತೀರ್ಮಾನದಂತೆ ಮಾಡದೇ ಈ ರೀತಿಯಲ್ಲಿ ವರ್ತಿಸುವ ವರ್ತಿಸುವುದು ಸೋಲಿನ ಭಯದಿಂದ ಎಂದು ಹೇಳಿಕೆ ನೀಡಿದ್ದಾರೆ. ಕಾನೂನು, ಮಹಿಳಾ ಆಯೋಗ ,ಹಾಗೂ ಸಂಧಾನಕಾರರ ಮಾತಿಗೂ ಬೆಲೆ ಕೊಡದೇ ಇರುವ ಬಗ್ಗೆ ಮಹಿಳೆ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೀಡಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಧಾನ ಸಭೆಯಲ್ಲಿ ಸುಳ್ಯ ಕಲೀಲ್ ಇಬ್ರಾಹಿಂ ಕಟ್ಟಿಕಾರ್ ರವರ ಮನೆಯಿಂದ ಕಲೀಲ್ ರವರ ತಂದೆ-ತಾಯಿ ಮಾವ ಹಾಗೂ ಕಲೀಲ್ ರವರು, ಸಂಧಾನಕಾರರಾಗಿ ಎಂಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ , ಹಸೈನಾರ್ ಜಯನಗರ, ಮಂಗಳೂರು ಜಮಾತೆ ಇಸ್ಲಾಂ ಕೌಟುಂಬಿಕ ಸಲಹೆಗಾರ ಸಮಿತಿಯ ಇಬ್ಬರು ಮಹಿಳಾ ಸದಸ್ಯರು ಭಾಗವಹಿಸಿದ್ದರು.