Ad Widget

ಬಾಳಿಲದ ವಿದ್ಯಾಬೋಧಿನೀಯಲ್ಲಿ ಯಕ್ಷಗಾನ ಹಾಗೂ ರಂಗತರಬೇತಿ ತರಗತಿಗಳ ಚಾಲನೆ

ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ವಜ್ರ ಮಹೋತ್ಸವ ವರ್ಷದ ಅಂಗವಾಗಿ ಸುವಿಚಾರ ಸಾಹಿತ್ಯ ಸಂಘದ ಸಹಯೋಗದೊಂದಿಗೆ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಹಾಗೂ ರಂಗತರಬೇತಿ ತರಗತಿಗಳನ್ನು ಆರಂಭಿಸಲಾಯಿತು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಸ್ಥಾಪಕ ಸದಸ್ಯರಾದ ಗಣಪಯ್ಯ ಕಾಯಾರ ದೀಪ ಬೆಳಗಿಸಿ ತರಗತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಂಗತರಬೇತಿ ಈ ಶಾಲೆಯಲ್ಲಿ ಹಿಂದೆ ಬಹಳಷ್ಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದಿರುವುದನ್ನು ಮೆಲುಕು ಹಾಕುತ್ತಾ ಶುಭ ಹಾರೈಸಿದರು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಎನ್ ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಜುಕೇಶನಲ್ ಸೊಸೈಟಿಯ ಕೋಶಾಧಿಕಾರಿ ರಾಧಾಕೃಷ್ಣ ರಾವ್ ಮಾತನಾಡುತ್ತಾ, ಎಲ್ಲ ವಿದ್ಯಾರ್ಥಿಗಳು ಈ ಸದುಪಯೋಗವನ್ನು ಬಳಸಿಕೊಂಡು, ಮುಂದಿನ ದಿನಗಳಲ್ಲಿ ಸರ್ವತೋಮುಖ ಏಳಿಗೆಯನ್ನು ಕಾಣವಂತಾಗಲಿ ಎಂದು ಹಾರೈಸಿದರು. ಸಂಚಾಲಕ ಪಿ ಜಿ ಎಸ್ ಎನ್ ಪ್ರಸಾದ್ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಅವರ ಸರ್ವಾಂಗೀಣ ಯಶಸ್ಸಿಗಾಗಿ ಈ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ ಅಂತ ಹೇಳಿದರು. ಶಾಲೆಯ 60 ನೆ ವರ್ಷದ ಸುಸಂದರ್ಭದಲ್ಲಿ ಆರಂಭಿಸುತ್ತಿರುವ ಈ ಶಿಬಿರ ಮುಂದೆ ಪ್ರತಿ ವರ್ಷವೂ ನಡೆಯಲಿದೆ ಅಂತ ತಿಳಿಸಿದರು. ಮುಖ್ಯೋಪಾಧ್ಯಾಯ ಯಶೋಧರ ನಾರಾಲು ಸ್ವಾಗತಿಸಿದರು. ಸಹಶಿಕ್ಷಕರಾದ ಲೋಕೇಶ ಬೆಳ್ಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮೀಶ ರೈ ಹಾಗೂ ಕೃಷ್ಣಪ್ಪ ಬಂಬಿಲರನ್ನು ಪರಿಚಯಿಸಿದರು. ವೆಂಕಟೇಶಕುಮಾರ್ ಧನ್ಯವಾದ ಸಮರ್ಪಣೆ ಮಾಡಿದರು. ಶಾಲಾ ವಿದ್ಯಾರ್ಥಿನಿಯರಾದ ಸೃಷ್ಟಿ, ಛಾಯಾ, ಪ್ರತೀಕ, ಚೈತನ್ಯ ಆರಂಭ ಗೀತೆ ಹಾಡಿದರು. ವಿದ್ಯಾರ್ಥಿನಿಯರಾದ ಚಿಂತನ, ಶ್ರೇಯಾ ಕಾರ್ಯಕ್ರಮ ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮೀಶ ರೈ ಹಾಗೂ ಕೃಷ್ಣಪ್ಪ ಬಂಬಿಲ ಯಕ್ಷಗಾನ ಹಾಗೂ ರಂಗತರಬೇತಿ ನಡೆಸಿಕೊಡಲಿದ್ದಾರೆ. ಪ್ರತಿ ಶನಿವಾರ ಅಪರಾಹ್ನ ಈ ತರಗತಿಗಳು ನಡೆಯುತ್ತವೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!