Ad Widget

ನಡುಗಲ್ಲು : ಶಾಲಾ ಮಂತ್ರಿಮಂಡಲ ರಚನೆ
ಮುಖ್ಯಮಂತ್ರಿಯಾಗಿ ಕೌಶಿಕ್.ಎನ್
ಉಪ ಮುಖ್ಯಮಂತ್ರಿಯಾಗಿ ನಿಖಿಲ್

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಜೂ.03 ರಂದು 2023-24ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಕೌಶಿಕ್.ಎನ್ ಹಾಗೂ ಉಪ ಮುಖ್ಯಮಂತ್ರಿಯಾಗಿ 6ನೇ ತರಗತಿಯ ನಿಖಿಲ್ ಆಯ್ಕೆಯಾದರು.


ಈ ಸಂದರ್ಭದಲ್ಲಿ ಶಿಕ್ಷಣ ಮಂತ್ರಿಯಾಗಿ 7ನೇ ತರಗತಿಯ ಧೃತಿ.ಎಂ, ಹಣಕಾಸು ಮಂತ್ರಿಯಾಗಿ 6ನೇ ತರಗತಿಯ ತೇಜಸ್.ಎಂ, ಆರೋಗ್ಯ ಮಂತ್ರಿಯಾಗಿ 7ನೇ ತರಗತಿಯ ಜಿಶಾ.ಡಿ.ಎಸ್, ಆಹಾರ ಮಂತ್ರಿಯಾಗಿ 7ನೇ ತರಗತಿಯ ಹನ್ವಿತ್.ಕೆ, ಕ್ರೀಡಾ ಮಂತ್ರಿಯಾಗಿ 7ನೇ ತರಗತಿಯ ಚೈತನ್ಯ, ರಕ್ಷಣಾ ಮಂತ್ರಿಯಾಗಿ 6ನೇ ತರಗತಿಯ ಚೈತನ್ಯ, ನೀರಾವರಿ ಮಂತ್ರಿಯಾಗಿ 7ನೇ ತರಗತಿಯ ಧನ್ವಿಶ್.ಎಮ್, ವಾರ್ತಾ ಮಂತ್ರಿಯಾಗಿ 7ನೇ ತರಗತಿಯ ನಿರೀಕ್ಷ.ಎಂ.ಕೆ, ಸ್ವಚ್ಚತಾ ಮಂತ್ರಿಯಾಗಿ 7ನೇ ತರಗತಿಯ ಶೃತಿ.ಯು.ಜೆ, ಕಾನೂನು ಮಂತ್ರಿಯಾಗಿ 7ನೇ ತರಗತಿಯ ಜಸ್ಮಿ.ಸಿ, ಗ್ರಂಥಾಲಯ ಮಂತ್ರಿಯಾಗಿ 7ನೇ ತರಗತಿಯ ತೃಪ್ತಿ.ಎ.ಎಲ್, ತೋಟಗಾರಿಕೆ ಮಂತ್ರಿಯಾಗಿ 6ನೇ ತರಗತಿಯ ಗೌತಮ್.ಕೆ, ವಿರೋಧ ಪಕ್ಷದ ನಾಯಕರಾಗಿ 7ನೇ ತರಗತಿಯ ಆದಿತ್ಯ.ಎಂ.ಕೆ ಹಾಗೂ 6ನೇ ತರಗತಿಯ ಅಮೃತ, ಅಭಿವೃದ್ಧಿ ಮಂತ್ರಿಯಾಗಿ 7ನೇ ತರಗತಿಯ ದೀಪಕ್.ಯು.ಪಿ ಇವರುಗಳು ಆಯ್ಕೆಯಾದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!