Ad Widget

ಅಚ್ರಪ್ಪಾಡಿ ಶಾಲೆಗೆ ಪಠ್ಯೋಪಕರಣ ಕೊಡುಗೆ

ದೇವಚಳ್ಳ‌ ಗ್ರಾಮದ ಅಚ್ರಪ್ಪಾಡಿ ಕಿ.ಪ್ರಾ.ಶಾಲೆಗೆ ಬೆಂಗಳೂರಿನ ಎಜುಕೇರ್‌ನ ಸಂಸ್ಥಾಪಕ ಜಯಚಂದ್ರ ಮತ್ತು ನಿರ್ದೇಶಕರು ಪಠ್ಯೋಪಕರಣಗಳ ಕೊಡುಗೆ ನೀಡಿದ್ದಾರೆ.

ಸುಮಾರು ₹17500 ಮೌಲ್ಯದ 35 ಶಾಲಾ ಬ್ಯಾಗ್‌ಗಳನ್ನು ತಮ್ಮ ತಂದೆ ಈಶ್ವರಯ್ಯನವರ ಸ್ಮರಣಾರ್ಥ ನೀಡಿದ್ದು, ಇದೇ ವೇಳೆ ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ನಟರಾಜು ಎ.ಬಿ ₹ 7500 ಮೌಲ್ಯದ ನೋಟ್‌ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ಒದಗಿಸಿದರು. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಈ ಕೊಡುಗೆ ನೀಡಿದ್ದಕ್ಕೆ ಶಾಲಾಡಳಿತ ಹಾಗೂ ಶಿಕ್ಷಕವೃಂದ ಧನ್ಯವಾದ ಸಮರ್ಪಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!