Ad Widget

ಜೂ.3: ಸುಳ್ಯದಲ್ಲಿ ದಿ.ಉಮೇಶ್ ವಾಗ್ಲೆ ಮತ್ತು ದಿ.ವೈಕುಂಠ ಪ್ರಭು ಸ್ಮರಣಾರ್ಥ ಬೃಹತ್ ಉಚಿತ ವೈದ್ಯಕೀಯ ಶಿಬಿರ

ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು,ಸುಳ್ಯ ಭಾಲಾವಲಿಕಾರ್ ರಾಜಾಪುರ ಸಾರಸ್ವತ ಸಮಾಜ, ಯುವ ಸಮಾಜ, ದುರ್ಗಾಪರಮೇಶ್ವರಿ ಭಜನಾ ಮಂಡಳಿ,ಮಹಿಳಾ ಮಂಡಳಿ,ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ.ಆಸ್ಪತ್ರೆಯ ಸಹಯೋಗದಲ್ಲಿ ಜೂ.3 ರಂದು ದಿ.ಆರ್.ಉಮೇಶ್ ವಾಗ್ಲೆ ಮತ್ತು ದಿ. ವೈಕುಂಠ ಪ್ರಭು ಎ. ರವರ ಸ್ಮರಣಾರ್ಥ ಬೃಹತ್ ಉಚಿತ ವೈದ್ಯಕೀಯ ಶಿಬಿರವು ಸುಳ್ಯದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಲಿರುವುದು.ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ಚಂದ್ರ ರವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದ್ದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಶಿಬಿರದ ಉದ್ಘಾಟನೆ ನೆರವೇರಿಸಲಿರುವರು. ಶಿಬಿರದಲ್ಲಿ ತಜ್ಞ ವೈದ್ಯರಿಂದ ಕಣ್ಣು, ಕಿವಿ,ಮೂಗು,ಗಂಟಲು,ಎಲುಬು,ಕೀಲು ಮುಂತಾದ ಆರೋಗ್ಯ ಸಮಸ್ಯೆ ಇರುವ ರೋಗಿಗಳನ್ನು ಪರೀಕ್ಷಿಸಲಿರುವರು.ಸೌಲಭ್ಯಗಳು ಉಚಿತ ಔಷಧಿ ವಿತರಣೆ, ಕನ್ನಡಕ ವಿತರಣೆ,ಸಾಮಾನ್ಯ ಆರೋಗ್ಯ ತಪಾಸಣೆ, ಮಧುಮೇಹ ತಪಾಸಣೆ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading