ಸುಳ್ಯ: ಅಜ್ಜಾವರ ಗ್ರಾಮದ ಮಾರ್ಗ ಮನೆ ರಾಮಚಂದ್ರ ಎಂಬವರ ಪತ್ನಿ ಅನಿತಾ (40)ಎಂಬವರು ತಮ್ಮ ತೋಟಕ್ಕೆ ಹೋಗಿದ್ದಾಗ ಅಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ರಾಮಚಂದ್ರರು ಬೆಳಗ್ಗೆ ಸುಳ್ಯಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಮಧ್ಯಾಹ್ನ ಮನೆಗೆ ಹೋದಾಗ ಪತ್ನಿ ಮನೆಯಲ್ಲಿ ಕಾಣಿಸಲಿಲ್ಲ. ತೋಟಕ್ಕೆ ಹೋಗಿರಬಹುದೆಂದು ಅವರನ್ನು ಹುಡುಕಿಕೊಂಡು ತೋಟಕ್ಕೆ ಹೋದಾಗ ಅಲ್ಲಿ ಅನಿತಾರವರು ಕುಸಿದು ಬಿದ್ದಿರುವುದು ಕಂಡುಬಂತು. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರೆಂದು ತಿಳಿದುಬಂದಿದೆ.
ಹೃದಯಾಘಾತದಿಂದ ಅವರು ಮೃತಪಟ್ಟಿರಬಹುದೆಂದು ಹೇಳಲಾಗಿದೆ. ಮೃತರು ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.