ಆಲೆಟ್ಟಿ ಗ್ರಾಮದ ಕೋಲ್ಚಾರು ಕುಟುಂಬಸ್ಥರ ತರವಾಡು ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮೇ.16,17 ಮತ್ತು 18 ರಂದು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ನಡೆಯಲಿಮೇ.16 ರಂದು ಬೆಳಗ್ಗೆ ಗಂಟೆ 8.30 ರಿಂದ ಕೋಲ್ಚಾರು ಐನ್ ಮನೆಯಿಂದ ಮತ್ತು ಶ್ರೀ ಶಾರದಾಂಬಾ ಭಜನಾ ಮಂದಿರದ ಬಳಿಯಿಂದ ಹಸಿರುವಾಣಿ ಮೆರವಣಿಗೆಯು ಸಾಗಿ ಬರಲಿದೆ. ಬಳಿಕಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ಧಾರ್ಮಿಕ ಸಭೆಯು ನಡೆಯಲಿದೆ. ಬೆಂಗಳೂರು ಚೆನ್ನೇನಹಳ್ಳಿ ಜನಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಎ.ಎಸ್.ನಿರ್ಮಲ ಕುಮಾರ್ ರವರು ಉಪನ್ಯಾಸ ನೀಡಲಿದ್ದಾರೆ. ರಾತ್ರಿ ಕೈವೀದು ನಡೆಯಲಿರುವುದು.ಮೇ.17 ರಂದು ಸಂಜೆ ತರವಾಡು ದೈವಸ್ಥಾನದಿಂದ ಭಂಡಾರ ಆಗಮಿಸಿ ಬಳಿಕ ಶ್ರೀ ಕಾರ್ನೋನ್ ದೈವದ ವೆಳ್ಳಾಟಂ ಶ್ರೀ ಕೋರಚ್ಚನ್ ದೈವದ ವೆಳ್ಳಾಟಂ, ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ, ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್, ಬಳಿಕ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ. ಮರುದಿನ ಬೆಳಗ್ಗೆ ಗಂಟೆ 7.00 ರಿಂದ ಶ್ರೀ ಕಾರ್ನೋನ್ ದೈವ ನಡೆದು ಶ್ರೀ ಕೋರಚ್ಚನ್ ದೈವವಾಗಿ ಶ್ರೀ ಕಂಡನಾರ್ ಕೇಳನ್ ದೈವ ನಡೆಯಲಿದೆ.ಅಪರಾಹ್ನ ಗಂಟೆ 3.00 ರಿಂದ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶವಾಗಿ ಸೂಟೆ ಸಮರ್ಪಣೆ ನಡೆಯಲಿರುವುದು.ಅಪರಾಹ್ನ ಗಂಟೆ 4.00 ರಿಂದ ಶ್ರೀ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ವಾಗಿ ಮರ ಪಿಳರ್ಕಲ್ ನಡೆದ ಬಳಿಕ ದೈವಸ್ಥಾನದಲ್ಲಿ ಕೈವೀದು ನಡೆಯಲಿರುವುದು.
- Thursday
- November 21st, 2024