ಕಳೆದ ಕೆಲವು ದಿನಗಳಿಂದ ಮಣಿಪುರದಲ್ಲಿ ಎರಡು ಗುಂಪುಗಳ ನಡೆಯುವ ಆಂತರಿಕ ಕಲಹದಿಂದ ಹಲವಾರು ಹಾನಿಯಾಗಿದೆ, ಹಲವರು ಜೀವ ಕಳೆದುಕೊಂಡಿದೆ, ಕೆಲವು ಸಮುದಾಯಗಳ ಮೇಲೂ ದಾಳಿಯಾಗಿದೆ. ಈ ಕಲಹವನ್ನು ತಕ್ಷಣವೇ ನಿಲ್ಲಿಸಲು ಸರ್ಕಾರ ಮಧ್ಯಪ್ರವೇಶ ಮಾಡಬೇಕು ಬೆಳ್ತಂಗಡಿ ಧರ್ಮಪ್ರಾಂತ್ಯದ ಶ್ರೀಸಾಮಾನ್ಯರ ಸಂಘಟನೆಯಾದ ಕೆಎಸ್‌ಎಂಸಿಎ ಒತ್ತಾಯಿಸುತ್ತದೆ ಎಂದು ಸಂಘಟನೆಯ ಅಧ್ಯಕ್ಷ ಬಿಟ್ಟಿ ನೆಡುನೀಲಂ ಹೇಳಿದ್ದಾರೆ.
ಈ ಬಗ್ಗೆ ತುರ್ತುಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ನಿರ್ದೇಶಕ ವಂ . ಫಾ. ಶಾಜಿ ಮಾಥ್ಯು , ಪ್ರದಾನ ಕಾರ್ಯದರ್ಶಿ ಸೆಬಾಸ್ಟ್ಯನ್ ಎಂ ಜೆ , ಕೋಶಾಧಿಕಾರಿ ಜಿಮ್ಮಿ ಗುಂಡ್ಯ, ಸದಸ್ಯರಾದ ಜೋರ್ಜ್ ಟಿ ವಿ , ಸೆಬಾಸ್ಟ್ಯನ್ ಪಿ ಸಿ , ರೀನಾ ಶಿಬಿ, ಅಲ್ಫೋನ್ಸಾ ಮುಂತಾದವರು ದನಿ ಸೇರಿಸಿದರು. ಮಣಿಪುರದ ಅಹಿತರ ಘಟನೆಯಲ್ಲಿ ಅನೇಕ ದೇವಾಲಯಗಳು , ಆಸ್ಪತ್ರೆಗಳು, ಶಾಲೆಗಳ ಮೇಲೂ ದಾಳಿಯಾಗಿದೆ. ವಿಶೇಷವಾಗಿ ಕ್ರೈಸ್ತ ಸಮುದಾಯದ ಮೇಲೆಯೇ ದಾಳಿಯಾಗುತ್ತಿದೆ . ಈ ಗಲಭೆಯ ಉದ್ದೇಶ ಗಮನಿಸಿದರೆ ಇದೊಂದು ಪೂರ್ವಯೋಜಿತ ಎಂದು ಸಂಶಯ ಹುಟ್ಟುತ್ತದೆ. ಇಂತಹ ಘಟನೆಗೆ ಮಣಿಪುರ ಸರ್ಕಾರವೇ ಕಾರಣವಾಗುತ್ತದೆ, ಗಲಭೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಅಗತ್ಯವಾಗಿತ್ತು.ಇದೀಗ ಗಲಭೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು, ಕ್ರೈಸ್ತ ಸಮುದಾಯವು ಶಾಂತಿ ಬಯಸುತ್ತದೆ, ಹಾಗಿದ್ದರೂ ಇಂತಹ ಘಟನೆ ನಡೆಯುವುದು ಖಂಡನೀಯ ಎಂದು ಬಿಟ್ಟಿ ನೆಡುನೀಲಂ ಹೇಳಿದ್ದಾರೆ.
- Saturday
- November 23rd, 2024