224 ಸದಸ್ಯ ಬಲವಿರುವ 16ನೇ ಕರ್ನಾಟಕ ರಾಜ್ಯ ವಿಧಾನಸಭೆಯ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದು, ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ.
ಮೀಸಲು ಕ್ಷೇತ್ರವಾದ ನಮ್ಮ ಸುಳ್ಯ ತಾಲೂಕಿನಲ್ಲಿ ಕೂಡ ಚುನಾವಣಾ ಕಾವು ರಂಗೇರುತ್ತಿದ್ದು, ಈ ಬಾರಿ ಸುಳ್ಯ ತಾಲೂಕಿನಲ್ಲಿ ಬಿ.ಜೆ.ಪಿ ಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ನಿಂದ ಜಿ.ಕೃಷ್ಣಪ್ಪ, ಜೆ.ಡಿ.ಎಸ್ ನಿಂದ ಹೆಚ್.ಎಲ್ ವೆಂಕಟೇಶ್, ಎ.ಎ.ಪಿ ಯಿಂದ ಸುಮನಾ ಬೆಳ್ಳಾರ್ಕರ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಗಣೇಶ್.ಎಂ, ಉತ್ತಮ ಪ್ರಜಾಕೀಯ ಪಕ್ಷದಿಂದ ರಮೇಶ್ ಬೂಡು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸುಂದರ ಮೇರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಗುರುವಪ್ಪ ಕಣದಲ್ಲಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸುಳ್ಯ ತಾಲೂಕಿನಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು.
ಇದೇ ತಿಂಗಳ ಮೇ.10 ರಂದು ರಾಜ್ಯದಾದ್ಯಂತ ವಿಧಾನಸಭಾ ಚುನಾವಣೆ ನಡೆಯಲಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಅಂತಿಮ ತೀರ್ಪು ಮತದಾರರ ಕೈಯಲ್ಲಿದೆ.
ಚುನಾವಣಾ ಕಾವು ರಂಗೇರುತ್ತಿರುವ ಸುಳ್ಯದಲ್ಲಿ ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎಂದು ಕಾದು ನೋಡಬೇಕಿದೆ.
✍️ಉಲ್ಲಾಸ್ ಕಜ್ಜೋಡಿ
- Saturday
- November 23rd, 2024