ಈ ಬಾರಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಕೃಷಿಕರಿಗೆ, ಯುವಕರಿಗೆ, ಅಸಂಘಟಿತ ಕಾರ್ಮಿಕರಿಗೆ ಹಾಗೂ ಎಲ್ಲಾ ವರ್ಗಗಗಳ ಜನತೆಯ ಅಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ತಿಳಿಸಿದರು.
ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ವಿವರಣೆಯನ್ನು ನೀಡಿದರು.
ಭ್ರಷ್ಟಾಚಾರ ಕಾಯ್ದೆಗೆ ಕಠಿಣ ನಿಯಮ ಹಾಗೂ ಲೋಕಾಯುಕ್ತ ಬಲವರ್ಧನೆಗೆ ಕ್ರಮ,ಒಂದು ವರ್ಷದೊಳಗೆ ಸರಕಾರಿ ಖಾಲಿ ಇರುವ ಹುದ್ದೆಗಳ ಭರ್ತಿ, ಕೃಷಿ ಆಧುನಿಕರಣಕ್ಕೆ 1.5 ಲಕ್ಷ ಕೋಟಿ ವಿನಿಯೋಗ, ಬಡ್ಡಿ ರಹಿತ ಸಾಲ 3ಲಕ್ಷದಿಂದ 10ಲಕ್ಷಕ್ಕೆ ಏರಿಕೆ, ಮಹಿಳೆಯರು ಆರಂಭಿಸುವ ಉದ್ಯಮಕ್ಕೆ 200 ಕೋಟಿ ಹೂಡಿಕೆ, ರಬ್ಬರ್ ಕೃಷಿಗಾಗಿ 25 ಕೋ.ರೂ ಹೂಡಿಕೆ, ಸ್ಟಾಟಪ್ ಗಾಗಿ 500ಕೋ. ರೂ ಸಾಲನಿಧಿ, ಭಯೋತ್ಪಾದನೆ, ಅತ್ಯಾಚಾರದಂತ ಹೇಯ ಕೃತ್ಯಗಳ ತೀರ್ಮಾನಕ್ಕೆ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆ, ಕ್ಷೀರಕ್ರಾಂತಿ ಕ್ರೆಡಿಟ್ ಕಾರ್ಡ್, ಹಾಲಿನ ಸಬ್ಸಿಡಿ ಏರಿಕೆ, ಪ್ರತೀ ಗ್ರಾ.ಪಂಚಾಯತ್ ಗೆ ಒಂದು ಕೋಟಿ ರೂ. ಅನುದಾನ, ಪ್ರತೀ ಹೋಬಳಿಯಲ್ಲಿ ಅಂಬೇಡ್ಕರ್ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಅಡಿಕೆ ಹಳದಿರೋಗಕ್ಕೆ ಕ್ರಮ, ಕಸ್ತೂರಿ ರಂಗನ್ ವರದಿಯ ಪರಿಶೀಲನೆ , ಆದಿ ದ್ರಾವಿಡರ ಅಭಿವೃದ್ಧಿಗೆ ಅನುದಾನ ಹಾಗೂ ಕಾಂಗ್ರೆಸ್ ನ 5 ಗ್ಯಾರೆಂಟಿ ಗಳಾದ 200 ಯುನಿಟ್ ಉಚಿತ ವಿದ್ಯುತ್, 2000ರೂ ಸಹಾಯಧನ, 10 ಕೆಜಿ ಅಕ್ಕಿ, ನಿರುದ್ಯೋಗ ಯುವಕರಿಗೆ ಸಹಾಯಧನ ಹಾಗೂ ಮಹಿಳೆಯರಿಗೆ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಸೇರಿದಂತೆ ಎಲ್ಲಾ ಭರವಸೆಗಳನ್ನು ಈಡೇರಿಸಲಗುವುದು ಎಂದು ಭರತ್ ಮುಂಡೋಡಿ ತಿಳಿಸಿದರು.
ಈ ಸಂದರ್ಭ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್, ಮುಖಂಡರಾದ ಸದಾನಂದ ಮಾವಜಿ, ಪಿ.ಎಸ್ ಗಂಗಾಧರ್ ಹಾಗೂ ಗೀತಾ ಕೋಲ್ಚಾರ್ ಉಪಸ್ಥಿತರಿದ್ದರು.
- Tuesday
- December 3rd, 2024