Ad Widget

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ V-8 (EPL2023)ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ V-8 ಇಂಜಿನಿಯರಿಂಗ್ ಪ್ರೀಮಿಯರ್ ಲೀಗ್ (EPL) ಕ್ರಿಕೆಟ್ ಪಂದ್ಯಾಟ ದಿನಾಂಕ
30-04-2023ರಂದು ಕೆ.ವಿ.ಜಿ. ಆಟದ ಮೈದಾನದಲ್ಲಿ ನಡೆಯಿತು. ರಂಜಿತ್ ಎನ್.ಆರ್. ಇನ್ಫೋಸಿಸ್ ಉದ್ಯೋಗಿ ಹಾಗೂ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಹಳೆವಿದ್ಯಾರ್ಥಿ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಕಠಿಣ ಪರಿಶ್ರಮ, ಶಿಸ್ತು, ಶ್ರದ್ಧೆ ಇವೇ ಮುಂತಾದವುಗಳನ್ನು ಒಳಗೊಂಡ ಅಧ್ಯಯನವು ವಿದ್ಯಾರ್ಥಿಗಳಿಗೆ ಯಶಸ್ಸನ್ನು ತಂದು ಕೊಡುತ್ತವೆ ಎಂದು ಕಿವಿ ಮಾತು ಹೇಳಿ ಶುಭ ಹಾರೈಸಿದರು. ಈ ಕ್ರೀಡಾ ಕೂಟದಲ್ಲಿ ಕಾಲೇಜಿನ ೧೮ ತಂಡಗಳು ಭಾಗವಹಿಸಿದ್ದವು. ಹಾಗೂ ವಿದ್ಯಾರ್ಥಿಗಳ Flashmob Dance ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು ಜೊತೆಗೆ ಸಿಡಿಮದ್ದು ಪ್ರದರ್ಶನ ನೆರೆದ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದವು. ನಂತರ ನಡೆದ ಪಂದ್ಯಾಟದಲ್ಲಿ ಪ್ರಥಮ ಸ್ಥಾನಿಯಾಗಿ ಹಾಗೂ ದ್ವಿತೀಯ ಸ್ಥಾನಿಯಾಗಿ CIVIL BUILDERS ತಂಡವು ಪಡೆದುಕೊಂಡಿತು. ಈ ಕ್ರೀಡಾ ಕೂಟದಲ್ಲಿ ಹಳೆವಿದ್ಯಾರ್ಥಿಗಳ ಒಂದು ತಂಡವು ಭಾಗವಹಿಸಿ ಪ್ರದರ್ಶನ ಪಂದ್ಯವನ್ನು ಆಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಡೀನ್-ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಮಾಶಂಕರ್ ಕೆ.ಎಸ್.ರವರು ಮಾತನಾಡಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಶುಭ ಹಾರೈಸಿ ಎಲ್ಲರು ಕ್ರೀಡಾ ಸ್ಪೂರ್ತಿಯೊಂದಿಗೆ ಆಟವಾಡಿ ಹೊನಲು ಬೆಳಕಿನ ಆಟವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಕಾಲೇಜಿನ ಆಡಳಿತಾಧಿಕಾರಿ, ಶ್ರೀ ನಾಗೇಶ್ ಕೊಚ್ಚಿ, ಡೀನ್-ಅಡ್ಮಿಶನ್ ಪ್ರೊ. ಬಾಲಪ್ರದೀಪ್ ಕೆ.ಎನ್, ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ., ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ. ಪ್ರಜ್ಞ ಎಂ.ಆರ್. ಮತ್ತು ಪ್ರೊ. ಲೋಕೇಶ್ ಪಿ.ಸಿ, ಪ್ರೊ. ರೇಖಾ ಎ.ಎ., ಪ್ರೊ. ವೆಂಕಟೇಶ್ ಯು.ಸಿ., ಪ್ರೊ. ಜಗದೀಶ್ ಎಂ., ಪ್ರೊ. ಭವ್ಯ ಪಿ.ಎಸ್., ಕ್ರೀಡಾ ಸಂಯೋಜಕರಾದ ಪ್ರೊ. ಅಜಿತ್ ಬಿ.ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ
ಶ್ರೀ ಭಾಸ್ಕರ್ ಎಸ್.ಬಿ. ಹಾಗೂ ಶ್ರೀ ತೀರ್ಥವರ್ಣ, ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರುಗಳು ಪಂದ್ಯಾಕೂಟದ ಯಶಸ್ಸಿಗೆ ಸಂಪೂರ್ಣ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!