ಪತಂಜಲಿ ಕೊರೊನಾ ಮದ್ದಿಗೆ ಆಯುಷ್ ಇಲಾಖೆ ಬ್ರೇಕ್ ಹಾಕಿದೆ . ಪತಂಜಲಿ ಉತ್ಪನ್ನದ ಬಗ್ಗೆ ಆಯುಷ್ ಇಲಾಖೆಗೆ ಮಾಹಿತಿ ಇಲ್ಲ ಎಂದು ತಿಳಿಸಿದೆ . ಪರೀಕ್ಷೆ ನಡೆಸಿ ಫಲಿತಾಂಶ ಬರುವವರೆಗೂ ಈ ಔಷಧಿಯಿಂದ ಕೊರೋನಾ ದೂರವಾಗುತ್ತದೆ ಎಂಬ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ಹಾಗೂ ವೈಜ್ಞಾನಿಕ ವಾಗಿ ಧೃಡೀಕೃತಗೊಳ್ಳುವವರೆಗೆ ರೋಗಿಗಳಿಗೆ ಪ್ರಯೋಗ ಮಾಡಬಾರದು ಎಂದು ಆಯುಷ್ ಇಲಾಖೆ ಪತಂಜಲಿಗೆ ತಿಳಿಸಿದೆ . ತಪ್ಪಿದಲ್ಲಿ ಕಾನೂನು ಕ್ರಮದ ಎಚ್ಚರಿಯನ್ನು ನೀಡಿದೆ.
ಕೊರೋನಾ ವೈರಸ್‌ಗೆ ಲಸಿಕೆ ಹಾಗೂ ಔಷಧ ಕಂಡುಹಿಡಿಯಲು ವಿಶ್ವದಾದ್ಯಂತ ಪ್ರಯತ್ನಗಳು ನಡೆದಿರುವ ನಡುವೆಯೇ , ಈ ವ್ಯಾಧಿಗೆ ಔಷಧ ಕಂಡುಹಿಡಿದಿರುವುದಾಗಿ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಹೇಳಿಕೊಂಡಿತ್ತು . ಈ ಸುದ್ದಿ ದೊಡ್ಡ ಮಟ್ಟದ ಪ್ರಚಾರವನ್ನು ಪಡೆದುಕೊಂಡಿತ್ತು . ಸುದ್ದಿಗಾರರ ಜತೆ ಮಾತನಾಡಿದ್ದ ಪತಂಜಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ( ಸಿಇಒ )
ಸುದ್ದಿಗಾರರ ಜತೆ ಮಾತನಾಡಿದ್ದ ಪತಂಜಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ( ಸಿಇಒ ) ಆಚಾರ್ಯ ಬಾಲಕೃಷ್ಣ , ‘ ನೂರಾರು ಕೊರೋನಾ ಪೀಡಿತರ ಮೇಲೆ ಈ ಔಷಧ ಪ್ರಯೋಗಿಸಲಾಗಿದೆ . ಇದು ಶೇ 100 ರಷ್ಟು ಉತ್ತಮ ಫಲಿತಾಂಶ ನೀಡಿದೆ . 5 ರಿಂದ 14 ದಿನ ಅವಧಿಯಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ ‘ ಎಂದಿದ್ದರು . ಮುಂಬೈನಲ್ಲಿ ಕೊರೋನಾ ವಿರುದ್ಧ ಹೋರಾಟ ಮಾಡಬಲ್ಲ ಮಾತ್ರೆಯೊಂದನ್ನು ತಯಾರಿಸಲಾಗಿದೆ ಎಂದು ಹೇಳಲಾಗಿತ್ತು .
- Friday
- November 22nd, 2024